ಬೆಂಗಳೂರು: ಬೀಗಲ್ಸ್ ಕ್ಲಬ್‌ನ ಅಚಿಂತ್ಯ ಮತ್ತು ನ್ಯಾಷನಲ್ ಗೇಮ್ಸ್ ವಿಲೇಜ್ ಕ್ಲಬ್‌ನ ಸುನೀಕ್ಷಾ ಅವರು ರಾಷ್ಟ್ರೀಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ 16 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಮುನ್ನಡೆಸಲಿದ್ದಾರೆ.
ಇದೇ 14ರಿಂದ 22ರವರೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯುವ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯು ಶನಿವಾರ ತಂಡಗಳನ್ನು ಪ್ರಕಟಿಸಿದೆ.
ತಂಡಗಳು ಇಂತಿವೆ: ಬಾಲಕರು: ಅಚಿಂತ್ಯ (ನಾಯಕ), ಮನೋಜ್, ಪ್ರಥಮ್, ಸೇತು, ದರ್ಶನ್, ಗೌರವ್, ಜೋಶುವಾ, ರೋಹನ್, ನಿಶಾಂತ್, ಕೌಶಿಕ್, ಹಿಮಾಂಶು ಮತ್ತು ವೇದಾಂತ್. ಕೋಚ್: ಆರ್.ಎಸ್.ಮೊಕಾಶಿ, ಸಹಾಯಕ ಕೋಚ್: ಆದಿತ್ಯ, ಮ್ಯಾನೇಜರ್: ಶ್ರೀಧರ್.
ಬಾಲಕಿಯರು: ಸುನೀಕ್ಷಾ (ನಾಯಕಿ), ಹರಿಣಿ, ಮೇಖಲಾ, ಬಿಂದುಶ್ರೀ, ಶ್ರೀಷ್ಮಾ, ಸಿಮ್ರನ್, ಸಂಜನಾ, ಜೈಷ್ಣವಿ, ಹರ್ಷಿತಾ, ಪಾವನಿ, ಸ್ಮೃತಿ ಮತ್ತು ಎಸ್.ಪ್ರಿಯಾಮ್. ಕೋಚ್: ಸತ್ಯನಾರಾಯಣ, ಮ್ಯಾನೇಜರ್: ಅಶ್ವಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.