ADVERTISEMENT

ಬ್ಯಾಸ್ಕೆಟ್‌ಬಾಲ್ ಟೂರ್ನಿ: ನೈರುತ್ಯ ರೈಲ್ವೆ ತಂಡಕ್ಕೆ ಒಲಿದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:30 IST
Last Updated 8 ಮಾರ್ಚ್ 2023, 19:30 IST
ಪ್ರಶಸ್ತಿ ವಿಜೇತ ನೈರುತ್ಯ ರೈಲ್ವೆ ತಂಡ: (ಎಡದಿಂದ) ಮೋಹನಬಾಲಾ, ಅಮೃತಾ, ಅನುಷಾ, ವರ್ಷಾ ನಂದಿನಿ, ಸೂರ್ಯದರ್ಶಿನಿ, ಬಾಂಧವ್ಯ, ಶೃತಿ ಅರವಿಂದ್ ಮತ್ತು ಕೋಚ್‌ ಜರಿನ್ ಸೋಮಯ್ಯ  – ಪ್ರಜಾವಾಣಿ ಚಿತ್ರ
ಪ್ರಶಸ್ತಿ ವಿಜೇತ ನೈರುತ್ಯ ರೈಲ್ವೆ ತಂಡ: (ಎಡದಿಂದ) ಮೋಹನಬಾಲಾ, ಅಮೃತಾ, ಅನುಷಾ, ವರ್ಷಾ ನಂದಿನಿ, ಸೂರ್ಯದರ್ಶಿನಿ, ಬಾಂಧವ್ಯ, ಶೃತಿ ಅರವಿಂದ್ ಮತ್ತು ಕೋಚ್‌ ಜರಿನ್ ಸೋಮಯ್ಯ – ಪ್ರಜಾವಾಣಿ ಚಿತ್ರ   

ಬೆಂಗಳೂರು: ದಿಟ್ಟ ಆಟವಾಡಿದ ನೈರುತ್ಯ ರೈಲ್ವೆ ತಂಡದವರು ಎಸ್‌.ಎಂ.ಎನ್‌. ಟ್ರೋಫಿಗಾಗಿ ನಡೆದ ರಾಜ್ಯಮಟ್ಟದ ಮಾತೃ ಕಪ್ ಮಹಿಳಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ನೈರುತ್ಯ ರೈಲ್ವೆ 98–52ರಿಂದ ಮೌಂಟ್ಸ್ ಕ್ಲಬ್ ತಂಡವನ್ನು ಮಣಿಸಿತು. ವಿಜೇತ ತಂಡಕ್ಕಾಗಿ ಬಾಂಧವ್ಯ 39 ಮತ್ತು ವರ್ಷಾ ನಂದಿನಿ 21 ಪಾಯಿಂಟ್ಸ್ ಗಳಿಸಿದರು. ಮೌಂಟ್ಸ್ ಕ್ಲಬ್ ಪರ ಪಾವನಿ 22 ಮತ್ತು ನಿಹಾರಿಕಾ 8 ಪಾಯಿಂಟ್ಸ್ ಕಲೆಹಾಕಿದರು.

ಪಂದ್ಯದ ಮೊದಲಾರ್ಧದ ಬಳಿಕ 55–21ರಿಂದ ಮುಂದಿದ್ದ ನೈರುತ್ಯ ರೈಲ್ವೆ ತಂಡ ಅದೇ ಲಯದೊಂದಿಗೆ ಮುಂದುವರಿದು ಪ್ರಶಸ್ತಿ ಗೆದ್ದಿತು.

ADVERTISEMENT

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಡಿವೈಇಎಸ್‌ ಮೈಸೂರು 62–33ರಿಂದ ಬೀಗಲ್ಸ್ ಬಿ.ಸಿ. ಎದುರು ಗೆದ್ದಿತು.

ಡಿವೈಇಎಸ್‌ ಮೈಸೂರು ತಂಡದ ಮೇಘನಾ ಅವರು ಟೂರ್ನಿಯ ಅತ್ಯಮೂಲ್ಯ ಆಟಗಾರ್ತಿ ಎನಿಸಿಕೊಂಡರು. ಪಾವನಿ ಅತ್ಯಂತ ಭರವಸೆಯ ಆಟಗಾರ್ತಿ ಪುರಸ್ಕಾರ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.