ಪ್ರಶಸ್ತಿ ವಿಜೇತ ವಿದ್ಯಾನಗರ ಡಿವೈಇಎಸ್ ಕ್ರೀಡಾ ವಸತಿ ಶಾಲಾ ಬಾಲಕಿಯರ ತಂಡ. (ನಿಂತವರು) ಎಡದಿಂದ: ಧನ್ಯಾ ಎಚ್.ಕೆ, ವೈಷ್ಣವಿ, ಇಶಿತಾ ಗೌಡ, ಕೋಚ್ ಸತ್ಯನಾರಾಯಣ, ಎಂ.ಆರ್. ಶೀತಲ್, ನಿರೀಕ್ಷಾ ಬಿ.ಸಿ, ಶ್ರೇಯಾ ಆರ್. ಗೌಡ (ಕುಳಿತವರು) ವರ್ಷಿಣಿ ಯು, ಚೈತ್ರಾ ರಾಮನಾಯಕ್, ವಿಭಾ ಎಸ್.ಎಂ, ಸಮೀಕ್ಷಾ ಎನ್. ಬಡಿಗೇರ್, ಶ್ರೇಯಾ ಮೈಲಾರಿ ಕರಾಡೆ, ಅರುಣಾ ಪಿ. ಮುದರ್
ಬೆಂಗಳೂರು: ನಗರದ ವಿದ್ಯಾನಗರ ಡಿವೈಇಎಸ್ ಕ್ರೀಡಾ ವಸತಿ ಶಾಲಾ ತಂಡವು ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಇಂಟರ್ ಹೈಸ್ಕೂಲ್ (17 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ನಡೆದ ಟೂರ್ನಿಯ ಫೈನಲ್ ಲೀಗ್‌ನಲ್ಲಿ ವಿದ್ಯಾನಗರ ಶಾಲಾ ತಂಡವು 41–28ರಿಂದ ಬೆಂಗಳೂರು ವಿಭಾಗ ತಂಡದ ವಿರುದ್ಧ ಗೆಲುವು ಸಾಧಿಸಿತು.
ಅದಕ್ಕೂ ಮೊದಲು ಲೀಗ್ ಪಂದ್ಯಗಳಲ್ಲಿ 26-05ರಿಂದ ಕಲಬುರಗಿ ವಿಭಾಗದ ವಿರುದ್ಧ; 58–53ರಿಂದ ಮೈಸೂರು ವಿಭಾಗದ ವಿರುದ್ಧ; 43–26ರಿಂದ ಬೆಳಗಾವಿ ವಿಭಾಗದ ವಿರುದ್ಧ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.