ADVERTISEMENT

ಫೆಡರೇಷನ್‌ಗಳ ಸಿಬ್ಬಂದಿಗೆ ಕೊರೊನಾ‌ ತಪಾಸಣೆ ಮಾಡಿಸಿ: ನರಿಂದರ್‌‌ ಬಾತ್ರಾ

ಹಾಕಿ ಇಂಡಿಯಾದ ಇಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಮನವಿ

ಪಿಟಿಐ
Published 30 ಮೇ 2020, 21:39 IST
Last Updated 30 ಮೇ 2020, 21:39 IST
ನರಿಂದರ್ ಬಾತ್ರಾ
ನರಿಂದರ್ ಬಾತ್ರಾ   

ನವದೆಹಲಿ: ರಾಷ್ಟ್ರೀಯ ಕ್ರೀಡಾ ಫೆಡರೇಷನ್ಸ್‌ (ಎನ್‌ಎಸ್‌ಎಫ್‌) ಹಾಗೂ ರಾಷ್ಟ್ರೀಯ ಒಲಿಂಪಿಕ್‌ ಸಮಿತಿಗಳು (ಎನ್‌ಒಸಿ) ತಮ್ಮ ಎಲ್ಲ ಸಿಬ್ಬಂದಿಯನ್ನು ಕೊರೊನಾ ತಪಾಸಣೆಗೆ ಒಳಡಿಸಬೇಕು ಎಂದು ಭಾರತೀಯ ಒಲಿಂಪಿಕ್‌ ಸಮಿತಿ (ಐಒಎ) ಅಧ್ಯಕ್ಷ ನರಿಂದರ್‌‌ ಬಾತ್ರಾ ಮನವಿ ಮಾಡಿದ್ದಾರೆ. ಹಾಕಿ ಇಂಡಿಯಾದ ಇಬ್ಬರು ಸಿಬ್ಬಂದಿಗೆ ಶನಿವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಾಕಿ ಇಂಡಿಯಾದ 29 ಸಿಬ್ಬಂದಿಯನ್ನು ಶುಕ್ರವಾರ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಲೆಕ್ಕಪತ್ರ ವಿಭಾಗದ ಒಬ್ಬರಿಗೆ ಹಾಗೂ ಜೂನಿಯರ್‌ ಫೀಲ್ಡ್‌ ಅಧಿಕಾರಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

‘ಎನ್‌ಒಸಿ, ಎಲ್ಲ ಎನ್‌ಎಸ್‌ಎಫ್‌ ಹಾಗೂ ರಾಜ್ಯ ಒಲಿಂಪಿಕ್‌ ಸಂಸ್ಥೆಗಳಸಿಬ್ಬಂದಿ ಹಾಗೂ ನೌಕರರು ಯಾವುದೇ ವಿಳಂಬ ಮಾಡದೆ ಕೋವಿಡ್‌ ತಪಾಸಣೆಗೆ ಒಳಗಾಗಬೇಕು. ಇದು ನನ್ನ ಮನವಿ ಹಾಗೂ ಸಲಹೆ. ಈ ತಪಾಸಣೆಯು ನಮ್ಮ ಅಥ್ಲೀಟುಗಳು ಹಾಗೂ ಭಾಗೀದಾರರಲ್ಲಿ ಆತ್ಮವಿಶ್ವಾಸ ತುಂಬುತ್ತದೆ’ ಎಂದು ಬಾತ್ರಾ ಹೇಳಿದ್ದಾರೆ.

ADVERTISEMENT

ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಕಚೇರಿಯು 14 ದಿನ ಬಾಗಿಲು ಮುಚ್ಚಲಿದೆ. ನೆಗೆಟಿವ್‌ ವರದಿ ಬಂದ 25 ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

ಸೋಂಕು ದೃಢಪಟ್ಟ ಇಬ್ಬರು ಸಿಬ್ಬಂದಿಯನ್ನು ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ಗೃಹಬಂಧನದಲ್ಲಿ (ಹೋಮ್‌ ಕ್ವಾರಂಟೈನ್‌) ಇರಿಸಲಾಗಿದೆ. ಇಬ್ಬರ ಫಲಿತಾಂಶ ಇನ್ನೂ ನಿರ್ಧಾರವಾಗದ ಕಾರಣ ಅವರನ್ನು ಭಾನುವಾರ ಬೆಳಿಗ್ಗೆ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಮ್ಮ ತಂದೆಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಸ್ವತಃ ಬಾತ್ರಾ ಸದ್ಯ ಗೃಹಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.