ADVERTISEMENT

ಆರೋಗ್ಯ ಸಾಧನೆಗೆ ಬೆನ್‌ ಸೂತ್ರ

ದೇಹ ಮನಸಿನ ಕಾಳಜಿಯಲ್ಲೇ ಅಡಗಿದೆ ಉತ್ತಮ ಆರೋಗ್ಯ

ನಾಗರತ್ನ ಜಿ.
Published 23 ಫೆಬ್ರುವರಿ 2020, 19:30 IST
Last Updated 23 ಫೆಬ್ರುವರಿ 2020, 19:30 IST
ರಾಹುಲ್ ದ್ರಾವಿಡ್ ಜೊತೆಗೆ ಬೆನ್‌ ಗ್ರೀನ್‌ಫಿಲ್ಡ್‌.
ರಾಹುಲ್ ದ್ರಾವಿಡ್ ಜೊತೆಗೆ ಬೆನ್‌ ಗ್ರೀನ್‌ಫಿಲ್ಡ್‌.   

ಆರೋಗ್ಯ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಮಾತಿದೆ.ವೈಜ್ಞಾನಿಕ ವಿಧಾನ ಹಾಗೂ ಪೂರ್ವಜರ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳುವುದೊಂದೇ ಇಂದಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನುತ್ತಾರೆ ನ್ಯೂಯಾರ್ಕ್‌ ಟೈಮ್ಸ್‌ನ ಪ್ರಸಿದ್ಧ ಲೇಖಕ ಬೆನ್‌ ಗ್ರೀನ್‌ಫಿಲ್ಡ್‌.

ತಮ್ಮ ವಿನೂತನ ‘ಬೌಂಡ್‌ಲೆಸ್‌’ ಪುಸ್ತಕ ಪರಿಚಯಿಸಲು ನಗರಕ್ಕೆ ಬಂದ ಬೆನ್‌, ಒತ್ತಡ ಜೀವನದಿಂದ ಹೊರಬಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ಸರಳ ಮಾರ್ಗಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟ್‌ ಆಟಗಾರ ರಾಹುಲ್‌ ದ್ರಾವಿಡ್‌ ಇದ್ದರು.

ಅವರು ಸದೃಢ ಆರೋಗ್ಯ ಜೀವನ ಶೈಲಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಅವುಗಳನ್ನು ಪರೀಕ್ಷಿಸಿ ಉತ್ತಮ ಫಲಿತಾಂಶ ಬಂದ ನಂತರ, ಸಮಾಜಕ್ಕೂ ತಿಳಿಸಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಅನುಭವ ಮತ್ತು ತಾವು ಕಂಡ ಫಲಿತಾಂಶಗಳನ್ನು ಒಟ್ಟುಗೂಡಿಸಿ ಅವುಗಳಿಗೆ ಪುಸ್ತಕದರೂಪ ನೀಡಿದ್ದಾರೆ.

ADVERTISEMENT

ದೈಹಿಕಮತ್ತುಮಾನಸಿಕನಿಯಂತ್ರಣದಿಂದಲೇದೀರ್ಘಾಯುಷ್ಯವಾಗಲೀ,ಸದೃಢಆರೋಗ್ಯವನ್ನಾಗಲೀ ಸಾಧಿಸಲುಸಾಧ್ಯ ಎಂದು ಪೂರ್ವಿಜರು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸೂತ್ರ ಇಂದಿನ ಆಧುನಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಎನ್ನುವುದು ಅವರ ನಿಲುವು. ಇಂದು ನೈಸರ್ಗಿಕವಾಗಿ ಶುದ್ಧವಾದದ್ದು ಯಾವುದೂ ನಮಗೆ ಸಿಗುತ್ತಿಲ್ಲ. ಕೃತಕವಾಗಿಯೇ ನಾವು ಕೆಲ ಪೌಷ್ಟಿಕಾಂಶಗಳನ್ನು ಪಡೆಯುತ್ತಿದ್ದೇವೆ. ಇಂದು ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾದರಿಯನ್ನು ಅನುಸರಿಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಒತ್ತಡ ಜೀವನದಲ್ಲಿ ನಮ್ಮ ದೇಹ ಮತ್ತು ಮನಸಿನ ಕಾಳಜಿ ಮಾಡುವುದನ್ನೇ ಮರೆತ್ತಿದ್ದೇವೆ. ಈ ಎರಡರ ಸಮತೋಲನ ಕಾಪಾಡಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎನ್ನುವುದು ಅವರ ಪ್ರತಿಪಾದನೆ.

ಮೆದುಳು ಚುರುಕಾಗಲು ತಣ್ಣೀರು ಸ್ನಾನ

ಯೋಗ ಮತ್ತು ಪ್ರಾಣಾಯಾಮ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಅತ್ಯವಶ್ಯಕ. ನಿತ್ಯ ಜೀವನದಲ್ಲಿ ಈ ಎರಡನ್ನೂ ಅಳವಡಿಸಿಕೊಂಡರೆ ನೆಮ್ಮದಿ ಜೀವನ ಸಾಧ್ಯ. ಅಲ್ಲದೆ, ಮೆದುಳು ಚುರುಕಾಗಲು ತಣ್ಣನೆಯ ನೀರು ಸೇವನೆ ಮತ್ತು ತಣ್ಣೀರು ಸ್ನಾನ ಉತ್ತಮ ವಿಧಾನ. ಕಚೇರಿಯಲ್ಲಿಯೇ ದಿನದ ಹೆಚ್ಚು ಕಾಲ ಕಳೆಯುವುದರಿಂದ ಸೂರ್ಯನ ಕಿರಣ ದೇಹವನ್ನು ತಾಕುವುದೇ ಇಲ್ಲ. ಅಂತವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ನಿತ್ಯ ಬೆಳಿಗ್ಗೆ ಕನಿಷ್ಠ 15 ನಿಮಿಷಗಳಾದರೂ ದೇಹವನ್ನು ಬಿಸಿಲಿಗೆ ಒಡ್ಡುವುದು ಒಳಿತು ಎನ್ನುವುದು ಬಿನ್‌ ಅವರ ಸಲಹೆ.

ನಮ್ಮ ಆತ್ಮಬಲವನ್ನು ಜಾಗೃತಿಗೊಳಿಸಿದರೆ ಯಾವುದೂ ಅಸಾಧ್ಯವಲ್ಲ. ಇಚ್ಛಾಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಅಂಶಗಳನ್ನು ತಮ್ಮ ‘ಬೌಂಡ್‌ಲೆಸ್‌’ ಪುಸ್ತಕದಲ್ಲಿ ಹೇಳಿದ್ದಾರೆ. ನಿತ್ಯ ಬದುಕಿನ ಸಮಸ್ಯೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಹುಡುಕಬಹುದು, ಇಲ್ಲಿನ ಒಂದೊಂದು ಅಧ್ಯಾಯವೂ ಬದುಕನ್ನು ಅರ್ಥವೂರ್ಣವಾಗಿ ರೂಢಿಸಿಕೊಳ್ಳಲು ನೆರವಾಗುತ್ತವೆ ಎನ್ನುವುದು ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.