ADVERTISEMENT

ಬೆಂಗಳೂರು ವಿಶ್ವ 10ಕೆ: 90ರ ರಘುನಾಥ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 4:25 IST
Last Updated 20 ಏಪ್ರಿಲ್ 2023, 4:25 IST
ಬೈಲಹಳ್ಳಿ ರಘುನಾಥ್ ಜನಾರ್ದನ್‌
ಬೈಲಹಳ್ಳಿ ರಘುನಾಥ್ ಜನಾರ್ದನ್‌   

ಬೆಂಗಳೂರು: 15ನೇ ಆವೃತ್ತಿಯ ಬೆಂಗಳೂರು ವಿಶ್ವ 10ಕೆ ಮೇ 21ರಂದು ನಿಗದಿಯಾಗಿದೆ. 90 ವರ್ಷ ವಯಸ್ಸಿನ ರಘುನಾಥ್‌ ಬೈಲಹಳ್ಳಿ ಜನಾರ್ದನ್‌ ಇಲ್ಲಿ ಸ್ಪರ್ಧಿಸಲಿರುವ ಹಿರಿಯ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಳ್ಳಲಿದ್ದಾರೆ.

ರೈಲ್ವೆ ಉದ್ಯೋಗಿಯಾಗಿದ್ದ ರಘುನಾಥ್‌ 30 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಸಿಡ್ನಿ, ದುಬೈ ಸೇರಿದಂತೆ ವಿಶ್ವಮಟ್ಟದ ಮ್ಯಾರಥಾನ್‌ಗಳಲ್ಲಿ ಸ್ಪರ್ಧಿಸಿದ ಅನುಭವ ಅವರದು. ಈ ಹಿಂದೆ ಸೈಕ್ಲಿಸ್ಟ್ ಕೂಡ ಆಗಿದ್ದರು.

30 ವರ್ಷದ ಹಿಂದೆ ರಘುನಾಥ್ ಅವರನ್ನು ಮೂರ್ಛೆರೋಗ ಕಾಡಿತ್ತು. ಅದನ್ನು ಮೀರಿದ ಅವರು, ಉತ್ಸಾಹ ಕಳೆದುಕೊಳ್ಳದೆ ಮುನ್ನುಗ್ಗಿದ್ದಾರೆ.

ADVERTISEMENT

65 ವರ್ಷದ ಕೋದಂಡಪಾಣಿ ಹಾಗೂ ಮಹಿಳೆಯರ ಸ್ಪರ್ಧೆಯಲ್ಲಿ 70 ವರ್ಷದ ಶಾರದಾ ವೆಂಕಟರಾಮನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಆಯೋಜಕ ಸಂಸ್ಥೆ ಪ್ರೊಕ್ಯಾಮ್ ಇಂಟರ್‌ನ್ಯಾಷನಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.