Paris 2024 Olympics
ರಾಯಿಟರ್ಸ್ ಚಿತ್ರ
ಪ್ಯಾರಿಸ್ : ಭಾರತದ ನಿಶಾಂತ್ ದೇವ್, ಒಲಿಂಪಿಕ್ಸ್ ಬಾಕ್ಸಿಂಗ್‌ನ ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಈಕ್ವೆಡಾರ್‌ನ ಜೋಸ್ ಗೇಬ್ರಿಯಲ್ ರಾಡ್ರಿಗಸ್ ಟೆನೊರಿಯೊ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದರು.
ಬುಧವಾರ ರಾತ್ರಿ ನಡೆದ ಸೆಣಸಾಟದಲ್ಲಿ ಅವರು 3–2 ಭಿನ್ನ ತೀರ್ಪಿನಲ್ಲಿ ಜಯಶಾಲಿಯಾದರು.
ಮೊದಲ ಸುತ್ತಿನಲ್ಲಿ ದೇವ್ ಆಕ್ರಮಣಕಾರಿಯಾಗಿದ್ದು, ಎದುರಾಳಿಗೆ ಕರಾರುವಾಕ್ ಆಗಿ ಪಂಚ್‌ಗಳನ್ನು ನೀಡಿದರು. ಆದರೆ ಎರಡನೇ ಸುತ್ತಿನಲ್ಲಿ ಅವರು ದಣಿದಂತೆ ಕಂಡರೆ, ಈಕ್ವೆಡಾರ್ ಸ್ಪರ್ಧಿ ತಮ್ಮ ಉತ್ತಮ ಆಟ ಈ ಸುತ್ತಿಗೆ ಉಳಿಸಿದಂತೆ ಕಂಡಿತು. ಆದರೆ ಅಂತಿಮವಾಗಿ ನಿಶಾಂತ್ ತಮ್ಮ ಮುನ್ನಡೆ ಉಳಿಸಿಕೊಳ್ಳುವಲ್ಲಿ ಯಶಸ್ವಿ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.