ಲೆಲೆಕ್ಸ್ ಯಿ
ಪಿಟಿಐ ಚಿತ್ರ
ಪ್ಯಾರಿಸ್: ಬ್ರಿಟನ್‌ನ ಅಲೆಕ್ಸ್ ಯೀ ಅವರು ಪ್ಯಾರಿಸ್ ಒಲಿಂಪಿಕ್ಸ್ ಟ್ರಯಥ್ಲಾನ್ ಕ್ರೀಡೆಯಲ್ಲಿ ಬುಧವಾರ ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡರು. ತಡವಾಗಿ ನಡೆದ ಈ ಸ್ಪರ್ಧೆಯಲ್ಲಿ ಅವರು ನ್ಯೂಜಿಲೆಂಡ್‌ನ ಹೇಡನ್ ವಿಲ್ಡ್ ಅವರನ್ನು ಅಂತಿಮ ಹಂತವಿರುವಾಗ ಹಿಂದೆ ಹಾಕಿ ನಾಟಕೀಯವಾಗಿ ಅಗ್ರಸ್ಥಾನ ತಲುಪಿದರು.
ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆಯನ್ನು ಉತ್ತಮಪಡಿಸಿಕೊಂಡ ಯೀ, ಪ್ರಬಲ ಎದುರಾಳಿ ವಿಲ್ಡ್ ಅವರನ್ನು 10 ಕಿ.ಮಿ. ಓಟದ ಮುಕ್ತಾಯದ ಹಂತದಲ್ಲಿ ಹಿಮ್ಮೆಟ್ಟಿಸಿದರು. ಆತಿಥೇಯ ಫ್ರಾನ್ಸ್‌ನ ಲಿಯೊ ಬೆರ್ಜೆರ್ ಕಂಚಿನ ಪದಕ ಗೆದ್ದರು.
ಕಳೆದ ಕೆಲವು ದಿನಗಳಿಂದ ಸೆನ್ ನದಿಯು ಮಾಲಿನ್ಯ ಪರೀಕ್ಷೆಯ ಫಲಿತಾಂಶ ನಕಾರಾತ್ಮಕವಾಗಿದ್ದರಿಂದ ಆಯೋಜಕರಿಗೆ ತಲೆನೋವು ತಂದಿತ್ತು. ಆದರೆ ನೀರಿನ ಗುಣಮಟ್ಟ ಸುಧಾರಿಸಿ, ಮೊದಲು ನಡೆದ ಮಹಿಳೆಯರ ವಿಭಾಗದ ಸ್ಪರ್ಧೆ ಯಶಸ್ವಿಯಾಗಿದ್ದು ಆಯೋಜಕರು ನಿಟ್ಟುಸಿರು ಬಿಡುವಂತೆ ಮಾಡಿತು.
ಮಹಿಳೆಯರ ವಿಭಾಗದಲ್ಲಿ ಆತಿಥೇಯ ದೇಶದ ಕೆಸಾಂಡ್ರಾ ಬುಗ್ರಾಂಡ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬ್ರಿಟನ್‌ನ ಬೆಥ್ ಪಾಟರ್ ಕಂಚು ಗೆದ್ದರು.
2012ರ ಲಂಡನ್ ಮತ್ತು ರಿಯೋ ಒಲಿಂಪಿಕ್ಸ್‌ಗಳಲ್ಲಿ ಅಲಿಸ್ಟರ್ ಬ್ರೌನ್ಲಿ ಅವರು ಪುರುಷರ ಟ್ರಯಥ್ಲಾನ್ ಪದಕ ಗೆದ್ದ ಬ್ರಿಟನ್ ಶ್ರೀಮಂತ ಪರಂಪರೆಯನ್ನು ಅಲೆಕ್ಸ್ ಯಿ ಅನುಸರಿಸಿದರು.
ಒಲಿಂಪಿಕ್ ಟ್ರಯಥ್ಲಾನ್‌ನಲ್ಲಿ ಬ್ರಿಟನ್‌ನ ಶ್ರೀಮಂತ ಪರಂಪರೆಯನ್ನು ಅಲೆಕ್ಸ್ ಯೀ ಮುಂದುವರಿಸಿದರು. ಇದೇ ದೇಶದ ಅಲಿಸ್ಟರ್ ಬ್ರೌನ್ಲಿ ಅವರು 2012ರ ಲಂಡನ್ ಕ್ರೀಡೆಗಳಲ್ಲಿ, 2016ರ ರಿಯೊ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದರು. ಅವರ ಸಹೋದರ ಜೊನಾಥನ್ ಬ್ರೌನ್ಲಿ ಲಂಡನ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.