ADVERTISEMENT

ಚೀನಾ ಮಾಸ್ಟರ್ಸ್‌, ಡಚ್‌ ಓಪನ್‌ ರದ್ದು

ಪಿಟಿಐ
Published 7 ಜುಲೈ 2020, 13:56 IST
Last Updated 7 ಜುಲೈ 2020, 13:56 IST
bwf
bwf   

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಚೀನಾ ಮಾಸ್ಟರ್ಸ್‌ ಮತ್ತು ಡಚ್‌ ಓಪನ್‌ ಟೂರ್ನಿಗಳನ್ನು ಕೊರೊನಾ ಬಿಕ್ಕಟ್ಟಿನಿಂದಾಗಿ ರದ್ದು ಮಾಡಿದೆ.

‘ಈ ವರ್ಷದಬಿಡಬ್ಲ್ಯುಎಫ್‌ ವಾರ್ಷಿಕ ಕ್ಯಾಲೆಂಡರ್‌ನಿಂದ ಚೀನಾ ಮಾಸ್ಟರ್ಸ್‌ ಮತ್ತು ಡಚ್‌ ಓಪನ್‌ ಟೂರ್ನಿಗಳನ್ನು ಕೈಬಿಡಲಾಗಿದೆ’ ಎಂದುಬಿಡಬ್ಲ್ಯುಎಫ್‌ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಬ್ರುವರಿ 25ರಿಂದ ಮಾರ್ಚ್‌ 1ರವರೆಗೆ ನಡೆಯಬೇಕಿದ್ದ ಚೀನಾ ಮಾಸ್ಟರ್ಸ್‌ ಟೂರ್ನಿಯನ್ನು ಕೋವಿಡ್‌ ಕಾರಣದಿಂದಾಗಿ ಮೇ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದರಿಂದ ಇದನ್ನು ಮತ್ತೊಮ್ಮೆ ಮುಂದಕ್ಕೆ ಹಾಕಲಾಗಿತ್ತು. ಅದರನ್ವಯ ಟೂರ್ನಿಯು ಈ ವರ್ಷದ ಆಗಸ್ಟ್‌ 25ರಿಂದ 30ರವರೆಗೆ ಆಯೋಜನೆಯಾಗಬೇಕಿತ್ತು.

ADVERTISEMENT

ಡಚ್‌ ಓಪನ್‌ ಟೂರ್ನಿಯು ಅಕ್ಟೋಬರ್‌ 6ರಿಂದ 11ರವರೆಗೆ ನೆದರ್ಲೆಂಡ್ಸ್‌ನ ಅಲಮೆರೆಯಲ್ಲಿ ನಿಗದಿಯಾಗಿತ್ತು.

‘ಕೊರೊನಾ ವೈರಾಣುವಿನ ಪ್ರಸರಣವು ಹೆಚ್ಚುತ್ತಿರುವ ಕಾರಣ ಡಚ್‌ ಓಪನ್‌ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಬ್ಯಾಡ್ಮಿಂಟನ್‌ ನೆದರ್ಲೆಂಡ್ಸ್‌ ತಿಳಿಸಿದೆ. ಹೀಗಾಗಿ ಅನಿವಾರ್ಯವಾಗಿಯೇ ಟೂರ್ನಿ ರದ್ದು ಮಾಡಲಾಗಿದೆ’ ಎಂದುಬಿಡಬ್ಲ್ಯುಎಫ್‌ ಹೇಳಿದೆ.

ಮೇ 17ರಂದು ಪ್ರಕಟವಾಗಿದ್ದ ವಿಶ್ವ ರ‍್ಯಾಂಕಿಂಗ್‌ನ ಆಧಾರದಲ್ಲೇ ಮುಂಬರುವ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಶ್ರೇಯಾಂಕ ನೀಡುವುದಾಗಿಬಿಡಬ್ಲ್ಯುಎಫ್ ಇತ್ತೀಚೆಗೆ‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.