ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌ಗೆ ಮೀರಾಬಾಯಿ ಚಾನು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 17:59 IST
Last Updated 25 ಫೆಬ್ರುವರಿ 2022, 17:59 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   

ಸಿಂಗಪುರ್: ಭಾರತದ ಮೀರಾಬಾಯಿ ಚಾನು ಸಿಂಗಪುರ್ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಇದೇ ವರ್ಷ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದರು.

ಶುಕ್ರವಾರ ನಡೆದ ವೇಟ್‌ಲಿಫ್ಟಿಂಗ್‌ನಲ್ಲಿ 55 ಕೆಜಿ ವಿಭಾಗದಲ್ಲಿ ಅವರು ಸ್ಪರ್ಧಿಸಿದರು. ಅವರು ಒಟ್ಟು 191 ಕೆಜಿ (86 ಕೆಜಿ+105ಕೆಜಿ) ಭಾರ ಎತ್ತಿದರು. ಪ್ರಥಮ ಸ್ಥಾನ ಗಳಿಸಿದರು.

ಆಸ್ಟ್ರೇಲಿಯಾದ ಜೆಸಿಕಾ ಸೆವಾಸ್ಟೆಂಕೊ 167 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಪಡೆದರು. ಮಲೇಷ್ಯಾದ ಎಲಿ ಕೆಸಾಂದ್ರಾ ಇಂಗಲ್‌ಬರ್ಟ್ 165 ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ADVERTISEMENT

ಭಾರತದ ಸಂಕೇತ್ ಸಾಗರ್, ರಿಶಿಕಾಂತ್ ಸಿಂಗ್ ಮತ್ತು ಬಿಂದಿಯಾರಾಣಿ ದೇವಿ ಕೂಡ ಕಾಮನ್‌ವೆಲ್ತ್ ಕೂಟಕ್ಕೆ ಅರ್ಹತೆ ಪಡೆದರು.

ಮೀರಾಬಾಯಿ ಚಾನು ಅವರು ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

27 ವರ್ಷದ ಮಣಿಪುರದ ಮೀರಾಬಾಯಿ ಇದೇ ಮೊದಲ ಬಾರಿಗೆ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಮೊದಲು ಅವರು 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.