ADVERTISEMENT

ಚೆಸ್‌: ಎರಡನೇ ಸ್ಥಾನ ಪಡೆದ ಪ್ರಜ್ಞಾನಂದ

ಪಿಟಿಐ
Published 8 ಮಾರ್ಚ್ 2024, 19:33 IST
Last Updated 8 ಮಾರ್ಚ್ 2024, 19:33 IST
<div class="paragraphs"><p>ಪ್ರಜ್ಞಾನಂದ</p></div>

ಪ್ರಜ್ಞಾನಂದ

   

ಪ್ರಾಗ್‌ : ಭಾರತದ ಆರ್‌.ಪ್ರಜ್ಞಾನಂದ ಗೆಲುವಿಗೆ ತೀವ್ರ ಯತ್ನ ನಡೆಸಿದರೂ, ಅಂತಿಮವಾಗಿ ಝೆಕ್‌ ರಿಪಬ್ಲಿಕ್‌ನ ಡೇವಿಡ್‌ ನವಾರ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು. ಗುರುವಾರ ಮುಕ್ತಾಯಗೊಂಡ ಪ್ರಾಗ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಇತರ ನಾಲ್ಕು ಪಂದ್ಯಗಳೂ ‘ಡ್ರಾ’ ಆಗಿದ್ದು, ಪ್ರಜ್ಞಾನಂದ ಈ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದರು.

ಇನ್ನು ನಾಲ್ಕು ವಾರಗಳಲ್ಲಿ ಟೊರಾಂಟೊದಲ್ಲಿ ನಡೆಯಲಿರುವ ವಿಶ್ವ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿಯಲ್ಲಿ ಪ್ರಜ್ಞಾನಂದ ಅವರು ಭಾರತದ ಆಟಗಾರರ ಪೈಕಿ ಅತ್ಯಧಿಕ ರೇಟಿಂಗ್ ಹೊಂದಿರುವ ಆಟಗಾರನಾಗಿ ಕಣಕ್ಕೆ ಇಳಿಯಲಿದ್ದಾರೆ. ಡಿ.ಗುಕೇಶ್ ಮತ್ತು ವಿದಿತ್ ಗುಜರಾತಿ ಅವರೂ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ.

ADVERTISEMENT

ಉಜ್ಬೇಕಿಸ್ತಾನದ ಆಟಗಾರ ನಾದಿರ್ಬೆಕ್ ಅಬ್ದುಸತ್ತಾರೋವ್‌ ಒಂದು ಸುತ್ತು ಉಳಿದಿರುವಂತೆ ಚಾಂಪಿಯನ್ ಆಗುವುದನ್ನು ಖಚಿತಪಡಿಸಿದ್ದರು. ಅವರು ಅಂತಿಮವಾಗಿ ಒಟ್ಟು ಆರು ಅಂಕ ಪಡೆದರು. ಅವರು ರುಮೇನಿಯಾದ ರಿಚರ್ಡ್ ರ‍್ಯಾಪೋರ್ಟ್ ಜೊತೆ ಡ್ರಾ ಮಾಡಿಕೊಂಡರು. ಪ್ರಜ್ಞಾನಂದ ಐದು ಅಂಕ ಪಡೆದರು. ಇರಾನ್‌ನ ಪರ್ಹಾಮ್ ಮಘಸೂಡ್ಲು, ಝೆಕ್‌ ರಿಪಬ್ಲಿಕ್‌ನ ಎನ್ಗುಯೆನ್ ಥಾಯ್‌ ದೈವಾನ್ ಸಹ ಐದು ಪಾಯಿಂಟ್ಸ್‌ ಪಡೆದರು. ಗುಕೇಶ್‌, ರ‍್ಯಾಪೋರ್ಟ್‌, ಡೇವಿಡ್‌ ನವಾರಾ (ತಲಾ 4.5) ಐದನೇ ಸ್ಥಾನ ಪಡೆದರು. ವಿದಿತ್‌ ಗುಜರಾತಿ (3) ಕೊನೆಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.