ADVERTISEMENT

ಚೆಸ್‌: ಶಿವಾಂತ್‌ಗೆ ಅಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 19:37 IST
Last Updated 6 ಆಗಸ್ಟ್ 2023, 19:37 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಮೈಸೂರು: ಎಂ. ಶಿವಾಂತ್‌ ಅವರು ಭಾನುವಾರ ನಡೆದ ರಾಜ್ಯಮಟ್ಟದ ಸದ್ವಿದ್ಯಾ 19 ವಯಸ್ಸಿನೊಳಗಿನವರ ರ್‍ಯಾಪಿಡ್‌ ಚೆಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಸದ್ವಿದ್ಯಾ ಪಿ.ಯು. ಕಾಲೇಜಿನಲ್ಲಿ ನಡೆದ ಟೂರ್ನಿಯಲ್ಲಿ ಏಳು ಸುತ್ತುಗಳ ಅಂತ್ಯಕ್ಕೆ ಶಿವಾಂತ್‌ 6.5 ಅಂಕ ಕಲೆ ಹಾಕುವ ಮೂಲಕ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಎಸ್‌ವಿಎಐನ ಸ್ಪರ್ಧಿ ಶ್ರೇಯಸ್‌ ಪಾಟೀಲ‌ 6 ಅಂಕಗಳೊಂದಿಗೆ ದ್ವಿತೀಯ ಹಾಗೂ ಎಕ್ಸೆಲ್‌ ಪಬ್ಲಿಕ್‌ ಶಾಲೆಯ ಪ್ರೀತಂ ರಾವ್‌ 6 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದರು. ಸೇಂಟ್‌ ಜೋಸೆಫ್‌ ಕೇಂದ್ರೀಯ ಶಾಲೆ ಹಾಗೂ ಎನ್‌ಪಿಎಸ್‌ ಶಾಲಾ ತಂಡಗಳು ಉತ್ತಮ ಶಾಲೆ ಹಾಗೂ ಮಂಡ್ಯ ಚೆಸ್‌ ಅಕಾಡೆಮಿ, ಹಾಸನದ ಕದಂಬ ಚೆಕ್ ಅಕಾಡೆಮಿಗಳು ಉತ್ತಮ ಅಕಾಡೆಮಿ ಎಂಬ ಪ್ರಶಸ್ತಿಗೆ ಪಾತ್ರವಾದವು.

ಫಲಿತಾಂಶ ಇಂತಿದೆ.

ADVERTISEMENT

ಬಾಲಕರ ವಿಭಾಗ: 7 ವರ್ಷದೊಳಗಿನವರು: ಕೌಸ್ತುಬ್ ತೇಜ್‌ಕುಮಾರ್‌ (ಸೇಂಟ್‌ ಜೋಸೆಫ್‌ ಸೆಂಟ್ರಲ್ ಶಾಲೆ)–1, ವಿ. ಸಿದ್ವಿಕ್‌, (ಕೆಎನ್‌ಸಿ)–2, ಲಕ್ಷ್ಮಿತ್‌ ದಯಾನಂದ (ಡಿಪಿಎಸ್‌)–3

9 ವರ್ಷದೊಳಗಿನವರು: ಎಸ್‌. ಶ್ರಾಗ್ವಿದ (ವಿಬ್‌ಗಯಾರ್) ಬೆಂಗಳೂರು–1, ಆರ್. ತನುಶ್‌–2, ಕೆ.ಎಸ್. ಚಿನ್ಮಿತ್‌ (ಯುನಿಕ್ ಅಕಾಡೆಮಿ)–3

11 ವರ್ಷದೊಳಗಿನವರು: ಎನ್‌. ಸ್ಕಂದ ಅಪ್ರಮೇಯ (ಕೇಂದ್ರೀಯ ವಿದ್ಯಾಲಯ)–1, ಎಂ.ವಿ. ಪೂರ್ವಜ್‌ (ಮಂಡ್ಯ ಚೆಸ್‌ ಅಕಾಡೆಮಿ)–2, ಮಿಲನ್‌ ಎಸ್‌. ಗೌಡ (ಮಂಡ್ಯ ಚೆಸ್‌ ಅಕಾಡೆಮಿ)–3

13ವರ್ಷದೊಳಗಿನವರು: ನಿವಾನ್‌ ರಾಘವೇಂದ್ರ (ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆ)–1, ಎಂ. ಅಕುಲ್ ಆನಂದ್‌ (ಕ್ರಿಯೇಟಿವ್‌ ಚೆಸ್‌ ಅಕಾಡೆಮಿ)–2, ಎಂ.ಎಸ್. ರಿಷಿ (ಮಂಡ್ಯ ಚೆಸ್ ಅಕಾಡೆಮಿ)–3

15 ವರ್ಷದೊಳಗಿನವರು: ಪಿ. ಕಾರ್ತಿಕ್‌ (ಬಿವಿಬಿ)–1, ಬಿ.ಎಸ್. ನಾಗಚಿರಂತ್‌  (ಕ್ರಿಯೇಟಿವ್‌ ಚೆಸ್‌ ಅಕಾಡೆಮಿ)–2, ಟಿ.ಕೆ. ಶ್ರೀಹರಿ  (ಕ್ರಿಯೇಟಿವ್‌ ಚೆಸ್‌ ಅಕಾಡೆಮಿ) –3

ಬಾಲಕಿಯರ ವಿಭಾಗ:

7 ವರ್ಷದೊಳಗಿನವರು: ತ್ರಿಷಿಕಾ ಗೌಡ (ಕದಂಬ ಅಕಾಡೆಮಿ)–1, ದಿಶಿತಾ ರಾಜ್‌  (ಕದಂಬ ಅಕಾಡಮಿ)–2, ಅದ್ವಿತಾ ಮೋಹನ್‌, (ಚೈತನ್ಯ ಟೆಕ್ನೋ ಶಾಲೆ)–3

9 ವರ್ಷದೊಳಗಿನವರು: ಆರ್. ತ್ರಿಶಿಕಾ (ಎನ್‌ಪಿಎಸ್–)1, ರಾಜೇಶ್ವರಿ ಅಯ್ಯಪ್ಪನ್‌–2, ಎ.ಎಸ್‌. ಆರಾಧ್ಯ–3

11ವರ್ಷದೊಳಗಿನವರು: ವೈ.ಎಸ್‌. ಲಿಥಾನ್ಯ  (ಎನ್‌‍ಪಿಎಸ್‌)–1, ದಿಯಾ ಉಮೇಶ್‌ (ಎನ್‌ಪಿಎಸ್‌)–2, ಚಿಂತನಾ ಮನೋಹರ್‌ (ಮಂಡ್ಯ ಚೆಸ್ ಅಕಾಡೆಮಿ)–3

13 ವರ್ಷದೊಳಗಿನವರು: ಎಸ್‌. ಜಾನವಿ (ಕ್ರೈಸ್ಟ್‌ ಪಬ್ಲಿಕ್‌ ಶಾಲೆ)–1, ತನಿಶಾ ಜೈನ್‌ (ಮಂಡ್ಯ ಚೆಸ್ ಅಕಾಡೆಮಿ)–2, ಎಂ.ಎಚ್. ಯದ್ವಿತಿ (ಎಂಆರ್‌ಸಿಎ)–3

15 ವಯಸ್ಸಿನ ಒಳಗಿನವರು: ಆಕರ್ಷಾ ಕಿಶೋರ್  (ಚಾಮರಾಜನಗರ ಚೆಸ್‌ ಅಕಾಡೆಮಿ)–1, ಎಂ.ಎಸ್‌. ಯಾಶಿಕಾ (ಮಂಡ್ಯ ಚೆಸ್ ಅಕಾಡೆಮಿ)–2, ಎಸ್‌. ಹಿತಾ (ಮಂಡ್ಯ ಚೆಸ್ ಅಕಾಡೆಮಿ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.