ADVERTISEMENT

ಚೆಸ್‌ ವಿಶ್ವಕಪ್‌ ಸೆಮಿಫೈನಲ್: ಎರಡೂ ಆಟಗಳು ಡ್ರಾ

ಪಿಟಿಐ
Published 21 ನವೆಂಬರ್ 2025, 16:17 IST
Last Updated 21 ನವೆಂಬರ್ 2025, 16:17 IST
<div class="paragraphs"><p>ಯಾಕುಬೊಯೇವ್ (ಎಡಗಡೆ) ಮತ್ತು ಸಿಂದರೋವ್‌ </p></div>

ಯಾಕುಬೊಯೇವ್ (ಎಡಗಡೆ) ಮತ್ತು ಸಿಂದರೋವ್‌

   

ಫಿಡೆ ಚಿತ್ರ

ಪಣಜಿ: ಚೀನಾದ ಗ್ರ್ಯಾಂಡ್‌ ಮಾಸ್ಟರ್‌ ವೀ ಯಿ ಮತ್ತು ಉಜ್ಬೇಕಿಸ್ತಾನದ ನೊದಿರ್ಬೆಕ್ ಯಾಕುಬೊಯೇವ್ ಅವರು ಬಿಳಿ ಕಾಯಿಗಳಲ್ಲಿ ಆಡಿದರೂ, ತಮ್ಮ ಎದುರಾಳಿಗಳ ರಕ್ಷಣಾಕೋಟೆ ಭೇದಿಸುವಲ್ಲಿ ಯಶಸ್ಸು ಪಡೆಯಲಿಲ್ಲ. ಹೀಗಾಗಿ ಚೆಸ್‌ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಶುಕ್ರವಾರ ಎರಡೂ ಆಟಗಳು ಡ್ರಾ ಆದವು.

ADVERTISEMENT

ಯಾಕುಬೊಯೇವ್ ಅವರು ಸ್ವದೇಶದ ಜಾವೊಖಿರ್ ಸಿಂದರೋವ್ ಅವರ ಜೊತೆ ಕಡ್ಡಾಯ 30 ನಡೆಗಳ ನಂತರ ಡ್ರಾ ಕರಾರಿಗೆ ಸಹಿಹಾಕಿದರು.

ವೀ ಯಿ ಮತ್ತು ವಿಶ್ವ ಚೆಸ್‌ ಫೆಡರೇಷನ್‌ (ಫಿಡೆ) ಪ್ರತಿನಿಧಿಸುತ್ತಿರುವ ರಷ್ಯಾದ ಆ್ಯಂಡ್ರಿ ಇಸಿಪೆಂಕೊ 33 ನಡೆಗಳ ನಂತರ ಮೊದಲ ಕ್ಲಾಸಿಕಲ್‌ ಆಟವನ್ನು ಡ್ರಾ ಮಾಡಿಕೊಂಡರು. ಆದರೆ ಈ ಆಟದಲ್ಲಿ ಇಬ್ಬರಿಗೂ ಮೇಲುಗೈ ಸಾಧಿಸುವ ಕೆಲವು ಅವಕಾಶಗಳಿದ್ದವು. ಆದರೆ ಅದನ್ನು ಪರಿವರ್ತಿಸಲಾಗದೇ ಪಾಯಿಂಟ್‌ ಹಂಚಿಕೊಂಡರು.

ಇಸಿಪೆಂಕೊ ಪಂದ್ಯವನ್ನು ಬೇಗನೇ ಸಮಾನಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಚೀನಾದ ಆಟಗಾರ ಕೆಲಕಾಲ ಸಮಯದ ಒತ್ತಡಕ್ಕೂ ಸಿಲುಕಿದರು. ಆದರೆ ನಂತರ ರೂಕ್‌, ಬಿಷಪ್‌, ಕ್ವೀನ್‌  ಮೂಲಕ ಚೀನಾದ ಆಟಗಾರ, ರಷ್ಯಾ ಆಟಗಾರನ ಪಡೆಗಳ ಮೇಲೆ ದಾಳಿ ನಡೆಸಲು ಯತ್ನಿಸಿದರು. ಆದರೆ ಇಸಿಪೆಂಕೊ ಪರಿಪೂರ್ಣ ರಕ್ಷಣೆಯ ಆಟದಿಂದಾಗಿ ಸಮಸ್ಯೆಗೆ ಸಿಲುಕಲಿಲ್ಲ.

ನಾಲ್ವರ ಬಳಿಯೂ ಅರ್ಧ ಪಾಯಿಂಟ್‌ ಇವೆ. ಶನಿವಾರ ಎರಡನೇ ಕ್ಲಾಸಿಕಲ್ ಆಟ ನಡೆಯಲಿದೆ. ಅದರಲ್ಲಿ ಗೆದ್ದ ಆಟಗಾರ ಫೈನಲ್ ತಲುಪುತ್ತಾರೆ. ಒಂದೊಮ್ಮೆ ಈ ಆಟವೂ ಡ್ರಾ ಆದಲ್ಲಿ ವಿಜೇತರನ್ನು ನಿರ್ಧರಿಸಲು ಭಾನುವಾರ ಕಾಲಮಿತಿಯ ಟೈಬ್ರೇಕರ್‌ಗಳನ್ನು ಆಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.