ADVERTISEMENT

ಸಿಎಂ ಕಪ್: ಆಟಗಾರರ ಬಿಡ್‌ ಪ್ರಕ್ರಿಯೆ ಇಂದು

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಬೆಂಗಳೂರು: ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಯಲ್ಲಿ ನಡೆಯಲಿರುವ ‘ಸಿಎಂ ಕಪ್ 2026’ ಟೂರ್ನಿಗೆ ಆಟಗಾರರ ಬಿಡ್‌ ಮತ್ತು ಜೆರ್ಸಿ ಅನಾವರಣ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ಅರಮನೆ ಮೈದಾನದ ವೈಟ್ ಪೆಟಲ್ಸ್ ಗಾರ್ಡೇ ನಿಯಾದಲ್ಲಿ (ಗೇಟ್‌ 3) ನಡೆಯಲಿದೆ.

9 ಡ್ರೀಮ್ಜ್‌ ಮತ್ತು ಮೀಡಿಯಾ ಕನೆಕ್ಟ್‌ ಆಶ್ರಯದಲ್ಲಿ ವಸಂತ ನಗರದಲ್ಲಿರುವ ಬ್ಯಾಡ್ಮಿಂಟನ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಫೆ.21 ಮತ್ತು 22ರಂದು ಟೂರ್ನಿ ನಡೆಯಲಿದೆ. ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ವೈದ್ಯರು, ಮಾಧ್ಯಮದವರು ಮತ್ತು ಸಿನೆಮಾ ರಂಗದವರು ಟೂರ್ನಿಯಲ್ಲಿ ಭಾಗ
ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT