ADVERTISEMENT

ಕೊಕ್ಕೊ ಟೂರ್ನಿ: ನವಮುಂಬೈ ತಂಡ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:43 IST
Last Updated 2 ಜೂನ್ 2022, 19:43 IST
ಕೊಕ್ಕೊ ಟೂರ್ನಿಯಲ್ಲಿ ನವ ಮುಂಬೈ ಕಾರ್ಪೋರೇಷನ್ ಆಟಗಾರನನ್ನು ಮಹರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡದ ಆಟಗಾರ ಹಿಡಿಯಲೆತ್ನಿಸುತ್ತಿರುವುದು
ಕೊಕ್ಕೊ ಟೂರ್ನಿಯಲ್ಲಿ ನವ ಮುಂಬೈ ಕಾರ್ಪೋರೇಷನ್ ಆಟಗಾರನನ್ನು ಮಹರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡದ ಆಟಗಾರ ಹಿಡಿಯಲೆತ್ನಿಸುತ್ತಿರುವುದು   

ಪಾಂಡವಪುರ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರಮಾಜಿ ಶಾಸಕ ದಿ.ಕೆ.ಎಸ್‌.ಪುಟ್ಟಣ್ಣಯ್ಯ ಸ್ಮರಣೆಯಲ್ಲಿ ಆರಂಭಗೊಂಡ ಅಖಿಲ ಭಾರತ ಪುರುಷರ ಹೊನಲು–ಬೆಳಕಿನ ಕೊಕ್ಕೊ ಟೂರ್ನಿಯಲ್ಲಿ ಮಹಾರಾಷ್ಟ್ರದ ತಂಡಗಳು ಶುಭಾರಂಭ ಮಾಡಿದವು.

ಮೊದಲ ಪಂದ್ಯದಲ್ಲಿ ನವ ಮುಂಬೈ ಕಾರ್ಪೋರೇಷನ್ ತಂಡ ಮಹರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡದ ವಿರುದ್ಧ 1 ಅಂಕದೊಂದಿಗೆ ಜಯಗಳಿಸಿತು. ವಿದ್ಯುಚ್ಚಕ್ತಿ ಮಂಡಳಿ ತಂಡದ ಆಟಗಾರ ಓಂಕಾರ್ ಪಂದ್ಯ ಶ್ರೇಷ್ಠರಾದರು.

ನಂತರ ಮುಂಬೈ ಪಶ್ವಿಮ ರೈಲ್ವೆ ಹಾಗೂ ಮುಂಬೈ ಮಹಾ ನಗರಪಾಲಿಕೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಶ್ವಿಮ ರೈಲ್ವೆ ತಂಡ 6 ಅಂಕಗಳ ಜಯ ಗಳಿಸಿತು. ಪಶ್ವಿಮ ರೈಲ್ವೆ ತಂಡದ ಆಟಗಾರ ಮಹೇಶ್ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದರು. ಟೂರ್ನಿಯಲ್ಲಿ ದೇಶದ 11 ಪ್ರಮುಖ ತಂಡಗಳು ಭಾಗವಹಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.