
ಪಿಟಿಐ
ಕಾಮನ್‌ವೆಲ್ತ್ ಕ್ರೀಡೆ
ನವದೆಹಲಿ: 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ವಹಿಸಲಿದೆ.
ಅಹಮದಾಬಾದ್‌ನಲ್ಲಿ ಕ್ರೀಡಾಕೂಟ ನಡೆಸಲು ಭಾರತ ಬಿಡ್ ಸಲ್ಲಿಸಿತ್ತು. ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾ ಮಹಾಸಭೆಯಲ್ಲಿ 74 ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಪ್ರತಿನಿಧಿಗಳು ಭಾರತದ ಬಿಡ್ ಅನ್ನು ಅನುಮೋದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
2010ರಲ್ಲಿ ಕೊನೆಯ ಬಾರಿ ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ (ದೆಹಲಿಯಲ್ಲಿ) ವಹಿಸಿತ್ತು.
ಇದೇ ವೇಳೆ 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯದ ಗುರಿಯನ್ನೂ ಭಾರತ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.