ADVERTISEMENT

ಸೈಕ್ಲಿಂಗ್‌: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 17:24 IST
Last Updated 23 ಡಿಸೆಂಬರ್ 2025, 17:24 IST
ಪದಕದೊಂದಿಗೆ ಚಾಯಾ ನಾಗಶೆಟ್ಟಿ ಹಾಗೂ ಶ್ರೀನಿವಾಸ ರಜ‍ಪೂತ
ಪದಕದೊಂದಿಗೆ ಚಾಯಾ ನಾಗಶೆಟ್ಟಿ ಹಾಗೂ ಶ್ರೀನಿವಾಸ ರಜ‍ಪೂತ   

ಬೆಂಗಳೂರು: ಕರ್ನಾಟಕದ ಸೈಕ್ಲಿಂಗ್‌ಪಟುಗಳಾದ ಶ್ರೀನಿವಾಸ ರಜ‍ಪೂತ ಹಾಗೂ ಚಾಯಾ ನಾಗಶೆಟ್ಟಿ ಅವರು ಭುವನೇಶ್ವರದ ರುದ್ರಾಪುರದಲ್ಲಿ ಸೋಮವಾರ ಮುಕ್ತಾಯಗೊಂಡ 77ನೇ ಹಿರಿಯರ, 54ನೇ ಕಿರಿಯರ ಮತ್ತು 40ನೇ ಅತಿ ಕಿರಿಯರ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು.

ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಅಥ್ಲೀಟ್‌ ಶ್ರೀನಿವಾಸ ಅವರು 18 ವರ್ಷದೊಳಗಿನ ಬಾಲಕರ ವಿಭಾಗದ 20 ಕಿ.ಮೀ. ಪಾಯಿಂಟ್ ರೇಸ್‌ನಲ್ಲಿ 48 ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನಿಯಾದರು. ವಿಜಯಪುರದ ಮತ್ತೊಬ್ಬ ಅಥ್ಲೀಟ್‌ ಚಾಯಾ ಅವರು18 ವರ್ಷದೊಳಗಿನ ಬಾಲಕಿಯರ ವಿಭಾಗದ 16 ಕಿ.ಮೀ. ಪಾಯಿಂಟ್ ರೇಸ್‌ ಸ್ಪರ್ಧೆಯಲ್ಲಿ 15 ಅಂಕಗಳನ್ನು ಪಡೆದುಕೊಂಡರು. ಅದರೊಂದಿಗೆ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT