ಚೆನ್ನೈ: ರೇಡರ್ ಅಶು ಮಲಿಕ್ ಮತ್ತು ಡಿಫೆಂಡರ್ ಸಂದೀಪ್ ದೇಶ್ವಾಲ್ ಅವರ ಅಮೋಘ ಆಟದ ನೆರವಿನಿಂದ ಡೆಲ್ಲಿ ದಬಂಗ್ ತಂಡವು ಪ್ರೊ ಕಬಡ್ಡಿ ಲೀಗ್‌ನ ರೋಚಕ ಪಂದ್ಯದಲ್ಲಿ 3 ಅಂಕಗಳಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು.
ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 29–26ರಿಂದ ಪಾರಮ್ಯ ಮೆರೆದು, ಈ ಆವೃತ್ತಿಯ 11 ಪಂದ್ಯಗಳಲ್ಲಿ 10ನೇ ಜಯ ದಾಖಲಿಸಿಕೊಂಡು ಅಗ್ರಸ್ಥಾನದಲ್ಲಿ ಮುಂದುವರಿಯಿತು.
ಪಂದ್ಯದ ಮೊದಲಾರ್ಧದಲ್ಲಿ ಜೈಪುರ ತಂಡವು ಒಂದು ಅಂಕಗಳ (13–12) ಮುನ್ನಡೆ ಪಡೆದಿತ್ತು. ಆದರೆ, ಉತ್ತರಾರ್ಧದಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಡಬಂಗ್ ತಂಡವು 17–13 ಮುನ್ನಡೆಯೊಂದಿಗೆ ಗೆಲುವು ಸಾಧಿಸಿತು.
ದಬಂಗ್ ಪರ ನಾಯಕ ಅಶು ಮತ್ತು ಸಂದೀಪ್ ಕ್ರಮವಾಗಿ 8 ಮತ್ತು 7 ಅಂಕ ಗಳಿಸಿದರು. ಜೈಪುರ ತಂಡದ ರೆಜಾ ಮಿರ್ಬಘೇರಿ ಮತ್ತು ದೀಪಾಂಶು ಖಾತ್ರಿ ತಲಾ 5 ಅಂಕ ಕಲೆ ಹಾಕಿದರು. ಜೈಪುರ ತಂಡಕ್ಕೆ 16 ಪಂದ್ಯಗಳಲ್ಲಿ ಇದು ಆರನೇ ಸೋಲಾಗಿದೆ.
ಇಂದಿನ ಪಂದ್ಯಗಳು
ಪಟ್ನಾ ಪೈರೇಟ್ಸ್– ತಮಿಳು ತಲೈವಾಸ್ (ರಾತ್ರಿ 8)
ಹರಿಯಾಣ ಸ್ಟೀಲರ್ಸ್– ಡೆಲ್ಲಿ ದಬಾಂಗ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.