ADVERTISEMENT

ಪ್ರಶಸ್ತಿಯ ವಿಶ್ವಾಸದಲ್ಲಿ ಟಿವಿಎಸ್‌ ತಂಡದ ಚಾಲಕರು

ಇಂದಿನಿಂದ ಡೆಸರ್ಟ್‌ ಸ್ಟಾರ್ಮ್‌ ಮೋಟರ್‌ ರ‍್ಯಾಲಿ

ಪಿಟಿಐ
Published 7 ಮೇ 2019, 19:41 IST
Last Updated 7 ಮೇ 2019, 19:41 IST
ಆರ್‌.ನಟರಾಜ್‌
ಆರ್‌.ನಟರಾಜ್‌   

ನವದೆಹಲಿ: ಶೆರ್ಕೊ ಟಿವಿಎಸ್‌ ರೇಸಿಂಗ್‌ ತಂಡದ ಚಾಲಕರು ಬುಧವಾರದಿಂದ ರಾಜಸ್ಥಾನದ ಥಾರ್‌ ಮರುಭೂಮಿಯಲ್ಲಿ ನಡೆಯುವ ಡೆಸರ್ಟ್‌ ಸ್ಟಾರ್ಮ್‌ ಮೋಟರ್‌ ರ‍್ಯಾಲಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಟಿವಿಎಸ್‌ ತಂಡದ ಏಳು ಮಂದಿ ಚಾಲಕರು ಕಣದಲ್ಲಿದ್ದಾರೆ. ಕರ್ನಾಟಕದ ಆರ್‌.ನಟರಾಜ್‌, ಅಬ್ದುಲ್‌ ವಾಹೀದ್‌ ತನ್ವೀರ್‌, ಐಶ್ವರ್ಯ ಪಿಸ್ಸೆ,ಆರ್‌.ಇ. ರಾಜೇಂದ್ರ ಮತ್ತು ಫ್ರಾನ್ಸ್‌ನ ಆಡ್ರಿಯನ್‌ ಮೆಟ್ಗೆ ಅವರು 250 ಸಿಸಿ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಇಮ್ರಾನ್‌ ಪಾಷಾ ಮತ್ತು ಸಚಿನ್‌ ಅವರು 250 ಸಿಸಿ ಒಳಗಿನವರ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ADVERTISEMENT

ಒಟ್ಟು 600 ಕಿಲೊ ಮೀಟರ್ಸ್‌ ದೂರದ ಈ ರ‍್ಯಾಲಿಯು ಹಲವು ಹಂತಗಳಲ್ಲಿ ನಡೆಯಲಿದ್ದು ಮೇ 11ಕ್ಕೆ ಕೊನೆಗೊಳ್ಳಲಿದೆ. ರ‍್ಯಾಲಿಯಲ್ಲಿ ಒಟ್ಟು 100 ತಂಡಗಳು ಭಾಗವಹಿಸಲಿವೆ. ಮೊದಲ ಹಂತದ ಸ್ಪರ್ಧೆಗೆ (158 ಕಿ.ಮೀ) ಬಿಕಾನೇರ್‌ನಲ್ಲಿ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.