ADVERTISEMENT

ಟೆನಿಸ್: ದಿಗ್ವಿಜಯ್‌ ಪ್ರತಾಪ್‌ಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 19:27 IST
Last Updated 7 ಡಿಸೆಂಬರ್ 2025, 19:27 IST
<div class="paragraphs"><p>ಟೆನಿಸ್</p></div>

ಟೆನಿಸ್

   

ಬೆಂಗಳೂರು: ಭಾರತದ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರು ಗ್ವಾಲಿಯರ್ ಚಂಬಲ್ ಟೆನಿಸ್ ಅಸೋಸಿಯೇಷನ್ ​​ಕೋರ್ಟ್‌ನಲ್ಲಿ ನಡೆದ ರೌಂಡ್‌ಗ್ಲಾಸ್ ಐಟಿಎಫ್ ಪುರುಷರ ವಿಶ್ವ ಟೆನಿಸ್ ಟೂರ್ ಎಂ15 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.

ಮೊದಲ ಸೆಟ್‌ ಅನ್ನು 6–2ರಿಂದ ಗೆದ್ದಿದ್ದ ದಿಗ್ವಿಜಯ್‌, ಎರಡನೇ ಸೆಟ್‌ನಲ್ಲಿ 4–0 ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ ಮಾನ್ ಕೇಶರ್ವಾನಿ ಸ್ಪರ್ಧೆಯಿಂದ ಹಿಂದೆ ಸರಿದರು.

ADVERTISEMENT

ದಿಗ್ವಿಜಯ್ ಅವರು ಸೆಮಿಫೈನಲ್‌ನಲ್ಲಿ 4-6, 6-3, 7-6ರಿಂದ ಅಗ್ರ ಶ್ರೇಯಾಂಕದ ಆರ್ಯನ್ ಶಾ ಅವರಿಗೆ ಆಘಾತ ನೀಡಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ 7-6, 6-2 ಸೆಟ್‌ಗಳಿಂದ ನಾಲ್ಕನೇ ಶ್ರೇಯಾಂಕದ ಕಜಾಕಸ್ತಾನದ ಗ್ರಿಗೊರಿ ಲೊಮಾಕಿನ್ ಅವರನ್ನು ಸೋಲಿಸಿದ್ದರು.

ಕಳೆದ ತಿಂಗಳು ಭೋಪಾಲ್‌ನಲ್ಲಿ ನಡೆದ ಎಂ25 ಟೂರ್ನಿ ಯಲ್ಲಿ ಚಾಂಪಿಯನ್‌ ಆಗಿದ್ದ ಗ್ವಾಲಿಯರ್‌ನ ದಿಗ್ವಿಜಯ್ ಅವರಿಗೆ ಇದು ಎರಡನೇ ಪ್ರಶಸ್ತಿಯಾಗಿದೆ. ಅವರು ಭುವನೇಶ್ವರದಲ್ಲಿ ನಡೆದ ಎಂ15 ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಎಸ್‌.ಡಿ. ಪ್ರಜ್ವಲ್ ದೇವ್ ವಿರುದ್ಧ ಸೋತಿದ್ದರು.