ADVERTISEMENT

ಕ್ರೀಡೆಯೂ ಪಠ್ಯಕ್ರಮದ ಭಾಗವಾಗಲಿದೆ: ಸಿ.ಟಿ. ರವಿ

ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 17:01 IST
Last Updated 2 ನವೆಂಬರ್ 2020, 17:01 IST
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕ್ರೀಡಾಸಾಧಕರಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಳಿತವರು : ವರ್ಷ .ಎಸ್ ( ಬಿಲಿಯಡ್ಸ್ / ಸ್ನೂಕರ್), ಖುಷಿ. ವಿ ( ಟೇಬಲ್ ಟೆನಿಸ್‌), ರೀನಾ ಜಾರ್ಜ್ .ಎಸ್ (ಅಥ್ಲೆಟಿಕ್ಸ್), ಮಿಥಿಲಾ ಯು.ಕೆ. (ಬ್ಯಾಡ್ಮಿಂಟನ್), ಎಂ. ದೀಪ (ರೋಯಿಂಗ್), ಉಷಾರಾಣಿ .ಎಂ (ಕಬಡ್ಡಿ), ಬಾಂಧವ್ಯ ಎಚ್. ಎಂ (ಬ್ಯಾಸ್ಕೆಟ್‌ಬಾಲ್‌), ಗೀತಾ ದಾನಪ್ಪಗೋಳ (ಜುಡೋ), ಮೇಘ ಗೋಗಾಡ್‌ ( ಸೈಕ್ಲಿಂಗ್), ಎಂ .ಎನ್ ಪೊನ್ನಮ್ಮ (ಹಾಕಿ) ಮತ್ತು ಖುಷಿ ದಿನೇಶ್ (ಈಜು). ನಿಂತವರು : ವೆಂಕಪ್ಪ ಕೆಂಗಲಗುತ್ತಿ (ಸೈಕ್ಲಿಂಗ್), ರಾಜು ಅಡಿವೆಪ್ಪ ಬಾಟಿ ( ಸೈಕ್ಲಿಂಗ್), ಶೇಖರ್ ವೀರಸ್ವಾಮಿ (ಟೆನಿಸ್‌ - ಪ್ಯಾರಾ), ಅರ್ಜುನ್ ಹಲಕುರ್ಕಿ (ಕುಸ್ತಿ), ನಿಕ್ಕಿನ್ ತಿಮ್ಮಯ್ಯ (ಹಾಕಿ), ಪುಲಿಂದ ಲೋಕೇಶ್ ತಿಮ್ಮಣ್ಣ (ಹಾಕಿ), ಅವಿನಾಶ್ ಮಣಿ (ಈಜು), ಅನಿಲ್ ಕುಮಾರ್ ಬಿ.ಕೆ (ಬ್ಯಾಸ್ಕೆಟ್‌ಬಾಲ್‌), ತೇಜಸ್ .ಕೆ (ಶೂಟಿಂಗ್), ಶ್ರೀಹರಿ ನಟರಾಜ್ (ಈಜು) ಇದ್ದರು.- ಪ್ರಜಾವಾಣಿ ಚಿತ್ರ

ಬೆಂಗಳೂರು: ಈವರೆಗೂ ಕ್ರೀಡೆ ಎಲ್ಲ ಮಕ್ಕಳಿಗೂ ಪಠ್ಯಕ್ರಮದ ಭಾಗವಾಗಿರಲಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬಂದ ಬಳಿಕ ಕ್ರೀಡೆ ಸಾರ್ವತ್ರಿಕವಾಗಿ ಪಠ್ಯಕ್ರಮದ ಭಾಗವಾಗಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸೋಮವಾರ ನಡೆದ 2017, 2018 ಮತ್ತು 2019ನೇ ಸಾಲಿನ ಏಕಲವ್ಯ, ಕ್ರೀಡಾ ರತ್ನ, ಜೀವಮಾನ ಸಾಧನೆ, ಕ್ರೀಡಾ ಪೋಷಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಈ ನೀತಿಯ ಅಡಿಯಲ್ಲಿ ಮುಂದಿನ ವರ್ಷದಿಂದ ಹೊಸ ಪಠ್ಯಕ್ರಮ ಜಾರಿಗೆ ಬರಲಿದೆ. ಆ ಬಳಿಕ ಎಲ್ಲ ಮಕ್ಕಳೂ ಕ್ರೀಡೆಯನ್ನು ಪಠ್ಯವಾಗಿ ಕಲಿಯುವ ಅವಕಾಶ ಲಭಿಸಲಿದೆ’
ಎಂದರು.

ADVERTISEMENT

ಶಾಸಕ ರಿಜ್ವಾನ್‌ ಅರ್ಷದ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಆರ್‌. ಅಶೋಕ, ವಿಧಾನ ಪರಿಷತ್‌ ಸದಸ್ಯ ಕೆ. ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಲ್ಪನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.