ADVERTISEMENT

Shooting World Cup: ಚಿನ್ನ ಗೆದ್ದ ಇಳವೆನ್ನಿಲಾ ವಾಳರಿವನ್

ಪಿಟಿಐ
Published 17 ಸೆಪ್ಟೆಂಬರ್ 2023, 8:51 IST
Last Updated 17 ಸೆಪ್ಟೆಂಬರ್ 2023, 8:51 IST
<div class="paragraphs"><p>ಇಳವೆನ್ನಿಲಾ ವಾಳರಿವನ್</p></div>

ಇಳವೆನ್ನಿಲಾ ವಾಳರಿವನ್

   

(ಪಿಟಿಐ ಸಂಗ್ರಹ ಚಿತ್ರ)

ರಿಯೊ ಡಿ ಜನೈರೊ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಇಳವೆನ್ನಿಲಾ ವಾಳರಿವನ್ ಚಿನ್ನ ಗೆದ್ದಿದ್ದಾರೆ.

ADVERTISEMENT

ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ವಾಳರಿವನ್ ಒಟ್ಟು 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನ ಜಯಿಸಿದ್ದಾರೆ.

ಪ್ರಾನ್ಸ್‌ನ 20 ವರ್ಷದ ಒಷಿಯಾನ್ ಮುಲ್ಲರ್ ಬೆಳ್ಳಿ ಹಾಗೂ ಚೀನಾದ ಜಾಂಗ್ ಜಿಯಲ್ ಕಂಚಿನ ಪದಕ ಜಯಿಸಿದರು.

ಇಳವೆನ್ನಿಲಾ 630.5 ಅಂಕಗಳೊಂದಿಗೆ ಎಂಟನೇಯವರಾಗಿ ಫೈನಲ್ ಸುತ್ತು ಪ್ರವೇಶಿಸಿದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ ಪ್ರತಿ ಸಲವೂ 10.1ಕ್ಕೂ ಹೆಚ್ಚು ಪಾಯಿಂಟ್ಸ್ ಗಿಟ್ಟಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ 16 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸದ್ಯ ಭಾರತ ಪದಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.