ADVERTISEMENT

ಚೀನಾದಲ್ಲಿ ಏಷ್ಯನ್ ಯೂಥ್ ಗೇಮ್ಸ್

ಪಿಟಿಐ
Published 1 ಏಪ್ರಿಲ್ 2020, 19:45 IST
Last Updated 1 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾದಿಂದ ತತ್ತರಿಸಿರುವ ಚೀನಾ ಮುಂದಿನ ವರ್ಷದ ನವೆಂಬರ್‌ನಲ್ಲಿ ಏಷ್ಯನ್ ಯೂಥ್ ಗೇಮ್ಸ್‌ಗೆ ಆತಿಥ್ಯ ವಹಿಸಲಿದೆ. ಇದು ಮೂರನೇ ಆವೃತ್ತಿಯ ಕ್ರೀಡಾಕೂಟ ಆಗಿದ್ದು ಶಾಂಟೊದಲ್ಲಿ ನವೆಂಬರ್ 20ರಿಂದ 28ರ ವರೆಗೆ ನಡೆಯಲಿದೆ ಎಂದು ಏಷ್ಯಾ ಒಲಿಂಪಿಕ್ ಸಮಿತಿ ಬುಧವಾರ ತಿಳಿಸಿದೆ.

ಮೊದಲ ಏಷ್ಯನ್ ಯೂಥ್ ಗೇಮ್ಸ್‌ 2011ರಲ್ಲಿ ಸಿಂಗಪುದರಲ್ಲಿ ನಡೆದಿತ್ತು. 2013ರಲ್ಲಿ ಚೀನಾದ ನಾನ್ಜಿಂಗ್‌ನಲ್ಲಿ ನಡೆದಿತ್ತು. ಈ ಬಾರಿ ಜಕಾರ್ತವನ್ನು ಬದಲಿ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಜಕಾರ್ತ ಈಗಾಗಲೇ ಆತಿಥ್ಯದಿಂದ ಹಿಂದೆ ಸರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT