ನವದೆಹಲಿ/ಭೋಪಾಲ್: ಇಶಾ ಸಿಂಗ್ ಮತ್ತು ಅನೀಶ್ ಭಾನವಾಲಾ ಅವರು ಭಾನುವಾರ ಮಹಿಳೆಯರ 25 ಮೀಟರ್ ಪಿಸ್ತೂಲ್ ಮತ್ತು ಪುರುಷರ 25 ಮೀಟರ್ ರಾಪಿಡ್-ಫೈರ್ ಪಿಸ್ತೂಲ್ (ಆಎಫ್‌ಪಿ) ನಲ್ಲಿ ಕ್ರಮವಾಗಿ ಎರಡನೇ ಒಲಿಂಪಿಕ್ ಆಯ್ಕೆ ಟ್ರಯಲ್‌ನಲ್ಲಿ ಗೆಲುವು ದಾಖಲಿಸಿದ್ದಾರೆ.
ದೆಹಲಿಯಲ್ಲಿ ನಡೆದ ಇದೇ ಸ್ಪರ್ಧೆಯಲ್ಲಿ ಅನೀಶ್ ಮೊದಲ ಟ್ರಯಲ್ ಗೆದ್ದಿದ್ದರೆ, ದೆಹಲಿಯ ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಇಶಾ ಎರಡನೇ ಟ್ರಯಲ್ ಜಯಿಸಿದ್ದರು.
ಎಂ.ಪಿ ಸ್ಟೇಟ್ ಶೂಟಿಂಗ್ ಅಕಾಡೆಮಿ (ಎಂಪಿಎಸ್ಎಸ್ಎ) ರೇಂಜ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಟ್ರಯಲ್‌ನಲ್ಲಿ ಇಶಾ ಫೈನಲ್‌ನಲ್ಲಿ 43 ಅಂಕಗಳನ್ನು ಗಳಿಸುವ ಮೂಲಕ ಮೊದಲ ಗೆಲುವು ಸಾಧಿಸಿದರು. ಈ ತಿಂಗಳ ಆರಂಭದಲ್ಲಿ ಬಾಕು ವಿಶ್ವಕಪ್‌ನಲ್ಲಿ ಕೊರಿಯಾದ ಕಿಮ್ ಯೆಜಿ ಸ್ಥಾಪಿಸಿದ ವಿಶ್ವ ದಾಖಲೆಗಿಂತ ಅವರ ಸ್ಕೋರ್ ಒಂದು ಪಾಯಿಂಟ್ ಹೆಚ್ಚಾಗಿದೆ.
ಮನು ಭಾಕರ್ 40 ಹಿಟ್ ಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ರಿದಮ್ ಸಾಂಗ್ವಾನ್ 33 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಸಿಮ್ರನ್ ಪ್ರೀತ್ ಕೌರ್ ಬ್ರಾರ್ ಮತ್ತು ಅಭಿದನ್ಯಾ ಪಾಟೀಲ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಒಲಿಂಪಿಕ್ ಆಯ್ಕೆ ಟ್ರಯಲ್ಸ್‌ನ ಎರಡೂ ಸ್ಪರ್ಧೆಗಳಲ್ಲಿ ನಾಲ್ಕನೇ ಟ್ರಯಲ್ (ಟಿ4) ಮತ್ತು ಅಂತಿಮ ಪಂದ್ಯಕ್ಕಾಗಿ ಎಲ್ಲಾ 10 ಶೂಟರ್‌ಗಳು ಸೋಮವಾರ ಮರಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.