ADVERTISEMENT

ಏಷ್ಯನ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ 11 ಪದಕ

ಪಿಟಿಐ
Published 17 ಫೆಬ್ರುವರಿ 2020, 19:45 IST
Last Updated 17 ಫೆಬ್ರುವರಿ 2020, 19:45 IST

ನವದೆಹಲಿ: ಭಾರತದ ಸ್ಪರ್ಧಿಗಳು ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 11 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಐದು ಬೆಳ್ಳಿ ಪದಕಗಳು ಸೇರಿವೆ.

ಕೆ.ವಿ.ಎಲ್. ಪಾವನಿ ಕುಮಾರಿ (45 ಕೆ.ಜಿ) ಅವರು ಯೂತ್‌ ಬಾಲಕಿಯರು ಮತ್ತು ಜೂನಿಯರ್‌ ಮಹಿಳಾ ವಿಭಾಗಗಳಲ್ಲಿ ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದರು.

ಸಿದ್ಧಾಂತ್‌ ಗೊಗೊಯ್‌ (61 ಕೆ.ಜಿ) ಅವರು ಯೂತ್‌ ಬಾಲಕ ಮತ್ತು ಜೂನಿಯರ್‌ ಪುರುಷರ ವಿಭಾಗಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದರು. ಅವರು ಕ್ರಮವಾಗಿ 145 ಹಾಗೂ 269 ಕೆ.ಜಿ.ಭಾರ ಎತ್ತಿದರು.

ADVERTISEMENT

ಯೂತ್‌ ಬಾಲಕರ 49 ಕೆ.ಜಿ.ವಿಭಾಗದ ಬೆಳ್ಳಿಯ ಪದಕ ಮುಕುಂದ್‌ ಅಹೆರ್‌ ಅವರ ಪಾಲಾಯಿತು. ಮುಕುಂದ್‌ ಅವರಿಂದ 189 ಕೆ.ಜಿ.ಸಾಮರ್ಥ್ಯ ಮೂಡಿಬಂತು.

ಯೂತ್‌ ಬಾಲಕಿ ಮತ್ತು ಜೂನಿಯರ್‌ ಮಹಿಳಾ ವಿಭಾಗಗಳಲ್ಲಿ ಕಣಕ್ಕಿಳಿದಿದ್ದ ಹರ್ಷದಾ ಗೌಡ್‌ (45 ಕೆ.ಜಿ) ಕಂಚಿನ ಪದಕಗಳನ್ನು ಜಯಿಸಿದರು.

ಬೋನಿ ಮಾಂಗಾಕ್ಯ (55 ಕೆ.ಜಿ), ನಿರ್ಮಲಾ ದೇವಿ (59 ಕೆ.ಜಿ), ಎಸ್‌.ಗುರು ನಾಯ್ಡು (49 ಕೆ.ಜಿ) ಮತ್ತು ಗೊಲೋಮ್‌ ಟಿಂಕು (55 ಕೆ.ಜಿ) ಅವರೂ ಕಂಚಿನ ಪದಕಗಳನ್ನು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.