ADVERTISEMENT

ಕೊರೊನಾ ಹಾವಳಿ | ಫ್ರೆಂಚ್‌ ಎಫ್‌1 ಗ್ರ್ಯಾನ್‌ ಪ್ರಿ ರದ್ದು

ಏಜೆನ್ಸೀಸ್
Published 27 ಏಪ್ರಿಲ್ 2020, 19:30 IST
Last Updated 27 ಏಪ್ರಿಲ್ 2020, 19:30 IST

ಪ್ಯಾರಿಸ್‌: ಫ್ರೆಂಚ್‌ ಫಾರ್ಮುಲಾ ಒನ್‌ ಗ್ರ್ಯಾನ್ ಪ್ರಿ ಮೋಟರ್‌ ರೇಸ್‌ ಅನ್ನು ಕೊರೊನಾ ವೈರಸ್‌ ಉಪಟಳದ ಹಿನ್ನೆಲೆಯಲ್ಲಿ ಸೋಮವಾರ ರದ್ದುಗೊಳಿಸಲಾಗಿದೆ. ಜೂನ್‌ 28ರಂದು ಈ ರೇಸ್‌ ನಿಗದಿಯಾಗಿತ್ತು.

‘ದಿನದಿಂದ ದಿನಕ್ಕೆ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗುತ್ತಿದೆ. ಸರ್ಕಾರದ ನಿರ್ದೇಶನ ಪಾಲಿಸಬೇಕಾಗಿದ್ದು, ರೇಸ್‌ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ರೇಸ್‌ನ ವ್ಯವಸ್ಥಾಪಕ ನಿರ್ದೇಶಕ ಎರಿಕ್‌ ಬೌಲಿಯರ್‌ ಹೇಳಿದ್ದಾರೆ.

ಇದು 2020ರ ಸಾಲಿನಲ್ಲಿ ರದ್ದು ಅಥವಾ ಮುಂದೂಡಿಕೆಯಾದ ರೇಸ್‌ ಟೂರ್ನಿಗಳಲ್ಲಿ ಫ್ರೆಂಚ್‌ ಗ್ರ್ಯಾನ್ ಪ್ರಿ ಹತ್ತನೆಯದ್ದು.

ADVERTISEMENT

ಪ್ರೇಕ್ಷಕರಿಲ್ಲದೆ ಬ್ರಿಟಿಷ್‌ ಗ್ರ್ಯಾನ್‌ ಪ್ರಿ: ಬ್ರಿಟಿಷ್‌ ಗ್ರ್ಯಾನ್‌ ಪ್ರಿ ರೇಸ್‌ ಪ್ರೇಕ್ಷಕರ ಗೈರುಹಾಜರಿಯಲ್ಲಿ ನಿಗದಿಯಂತೆ ನಡೆಯಲಿದೆ ಎಂದು ಸಂಘಟಕರು ಹೇಳಿದ್ದಾರೆ. ಜುಲೈ 19ರಂದು ನಡೆಯಬೇಕಿರುವ ಈ ರೇಸ್‌ನ ಮುಂದೂಡಿಕೆ ಅಥವಾ ರದ್ದುಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ರೇಸ್‌ ನಡೆದರೆ ಪ್ರೇಕ್ಷಕರಂತೂ ಇರುವುದಿಲ್ಲ’ ಎಂದು ರೇಸ್‌ ಸಂಘಟನಾ ಸಂಸ್ಥೆ ಸಿಲ್ವರ್‌ಸ್ಟೋನ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಟುವರ್ಟ್‌ ಪ್ರಿಂಜಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.