ADVERTISEMENT

ಫಾರ್ಮುಲಾ 2: ಮಿಂಚಿದ ಜೆಹಾನ್

ಸೌದಿ ಅರೇಬಿಯಾ ಫೀಚರ್‌ ರೇಸ್‌ನಲ್ಲಿ ಮೂರನೇ ಸ್ಥಾನ

ಪಿಟಿಐ
Published 21 ಮಾರ್ಚ್ 2023, 7:27 IST
Last Updated 21 ಮಾರ್ಚ್ 2023, 7:27 IST
ಜೆಹಾನ್ ದಾರುವಾಲಾ– ಟ್ವಿಟರ್ ಚಿತ್ರ
ಜೆಹಾನ್ ದಾರುವಾಲಾ– ಟ್ವಿಟರ್ ಚಿತ್ರ   

ಜೆದ್ದಾ, ಸೌದಿ ಅರೇಬಿಯಾ: ಭಾರತದ ಜೆಹಾನ್ ದಾರುವಾಲಾ ಅವರು ಫಾರ್ಮುಲಾ 2 ಚಾಂಪಿಯನ್‌ಷಿಪ್‌ ಸೌದಿ ಅರೇಬಿಯಾ ಸುತ್ತಿನಲ್ಲಿ ಎರಡನೇ ಬಾರಿ ‘ಪೋಡಿಯಂ ಫಿನಿಷ್‌’ ಮಾಡಿದ್ದಾರೆ.

ಭಾನುವಾರ ಇಲ್ಲಿ ನಡೆದ ಫೀಚರ್‌ ರೇಸ್‌ನಲ್ಲಿ ಡಚ್ ಮೂಲದ ಎಂಪಿ ಮೋಟರ್‌ಸ್ಪೋರ್ಟ್‌ ತಂಡ ಪ‍್ರತಿನಿಧಿಸಿದ್ದ ಜೆಹಾನ್‌ ಮೂರನೇ ಸ್ಥಾನ ಗಳಿಸಿದರು. ಅವರು 50 ನಿಮಿಷ 53.133 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ ಈ ವಾರಾಂತ್ಯದ ಎರಡೂ ರೇಸ್‌ಗಳಲ್ಲಿ ಅಗ್ರ 3ರಲ್ಲಿ ಸ್ಥಾನ ಪಡೆದ ಮೊದಲ ಸ್ಪರ್ಧಿ ಎನಿಸಿಕೊಂಡರು.

ಫೀಚರ್‌ ರೇಸ್‌ನಲ್ಲಿ ಡೆನ್ಮಾರ್ಕ್‌ನ ಫ್ರೆಡರಿಕ್‌ ವೆಸ್ಟಿ (ಪ್ರೆಮಾ ರೇಸಿಂಗ್ ತಂಡ, ಕಾಲ: 50 ನಿ. 45.587 ಸೆ.) ಅಗ್ರಸ್ಥಾನ ಗಳಿಸಿದರೆ, ಆಸ್ಟ್ರೇಲಿಯಾದ ಜಾಕ್‌ ಡೂಹಾನ್‌ (ವಿರ್ಟೊಸಿ ರೇಸಿಂಗ್‌, ಕಾಲ: 50ನಿ. 49.546 ಸೆ.) ಅವರು ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ADVERTISEMENT

ಶನಿವಾರ ನಡೆದ ಸ್ಪ್ರಿಂಟ್‌ ರೇಸ್‌ನಲ್ಲೂ ಜೆಹಾನ್ ಮೂರನೇ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.