ADVERTISEMENT

ಜೇಮ್ಸ್ ನೈಸ್ಮಿತ್ ಕಪ್‌ ಬ್ಯಾಸ್ಕೆಟ್‌ಬಾಲ್: ಫಾದರ್ ಮುಲ್ಲರ್‌,ಅಲೋಶಿಯಸ್ ಚಾಂಪಿಯನ್

ಎನ್‌ಎಚ್‌ಪಿಎಸ್‌, ಸೇಂಟ್ ತೆರೆಸಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 16:09 IST
Last Updated 24 ಆಗಸ್ಟ್ 2025, 16:09 IST
ಪುರುಷರ ವಿಭಾಗದ ಪ್ರಶಸ್ತಿ ಗೆದ್ದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತಂಡ (ನಿಂತವರು, ಎಡದಿಂದ): ರಿಷಭ್ ಭಟ್‌, ಹಿತೇಶ್ ಗೌಡ, ಸ್ನೇಹಿತ್, ಅಭಿಷೇಕ್ ಜೋಸೆಫ್‌, ಪ್ರಖರ್ ಕೆ, ಅದಿತ್ ಚೆರಿಯಾನ್‌ ಮತ್ತು ಪೃಥ್ವಿ ಸಿಂಗ್‌ (ಕೆಳಗಿನ ಸಾಲು): ಜೇಕಬ್‌ ಮತ್ತು ಶಾನ್ ಸಾಜನ್‌
ಪುರುಷರ ವಿಭಾಗದ ಪ್ರಶಸ್ತಿ ಗೆದ್ದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತಂಡ (ನಿಂತವರು, ಎಡದಿಂದ): ರಿಷಭ್ ಭಟ್‌, ಹಿತೇಶ್ ಗೌಡ, ಸ್ನೇಹಿತ್, ಅಭಿಷೇಕ್ ಜೋಸೆಫ್‌, ಪ್ರಖರ್ ಕೆ, ಅದಿತ್ ಚೆರಿಯಾನ್‌ ಮತ್ತು ಪೃಥ್ವಿ ಸಿಂಗ್‌ (ಕೆಳಗಿನ ಸಾಲು): ಜೇಕಬ್‌ ಮತ್ತು ಶಾನ್ ಸಾಜನ್‌   

ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡದವರು ಭಾನುವಾರ ಮುಕ್ತಾಯಗೊಂಡ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಆಯೋಜಿಸಿದ್ದ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಫಾದರ್ ಮುಲ್ಲರ್ ತಂಡ 58–48ರಲ್ಲಿ ಎನ್‌ಐಟಿಕೆಯನ್ನು ಮಣಿಸಿತು. ಉಭಯ ತಂಡಗಳು ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದವು. ಮೊದಲಾರ್ಧದ ಮುಕ್ತಾಯಕ್ಕೆ ಫಾದರ್ ಮುಲ್ಲರ್ 24–15ರ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಆಕ್ರಮಣಕ್ಕೆ ಒತ್ತು ನೀಡಿದವು. ಹೀಗಾಗಿ ಪಾಯಿಂಟ್‌ಗಳು ಹರಿದುಬಂದವು. ಪ್ರೇಕ್ಷಕರೂ ರೋಮಾಂಚನಗೊಂಡರು.

ಮಹಿಳೆಯರ ಫೈನಲ್‌ನಲ್ಲಿ ಸೇಂಟ್ ಅಲೋಶಿಯಸ್ ತಂಡ ನಿಟ್ಟೆ ಕಾಲೇಜು ವಿರುದ್ಧ 28–14ರ ಜಯ ಸಾಧಿಸಿತು. ರಕ್ಷಣಾತ್ಮಕ ಆಟಕ್ಕೆ ಎರಡೂ ತಂಡಗಳು ಒತ್ತು ನೀಡಿದ್ದ ಪಂದ್ಯದ ಮೊದಲಾರ್ಧದಲ್ಲಿ ಅಲೋಶಿಯಸ್ 17–9ರ ಮುನ್ನಡೆ ಗಳಿಸಿತ್ತು. ಅಲೋಶಿಯಸ್‌ನ ಸಾನ್ವಿ ಕೋಟ್ಯಾನ್ ಉತ್ತಮ ಆಟಗಾರ್ತಿ ಎನಿಸಿಕೊಂಡರು.

ADVERTISEMENT

ಹೈಸ್ಕೂಲ್ ಬಾಲಕರ ವಿಭಾಗದ ರೋಚಕ ಫೈನಲ್‌ನಲ್ಲಿ ಬೆಂಗಳೂರಿನ ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಸ್ಕೂಲ್ ತಂಡ ನಗರದ ಲೂರ್ಡ್ಸ್‌ ಸೆಂಟ್ರಲ್ ಸ್ಕೂಲ್ ತಂಡವನ್ನು 35–32ರಲ್ಲಿ ಮಣಿಸಿತು. ಬಾಲಕಿಯರ ವಿಭಾಗದಲ್ಲಿ ಸೇಂಟ್ ತೆರೆಸಾ ತಂಡ ನಿಟ್ಟೆಯ ಎನ್‌ಎಸ್‌ಎಎಂಇ ವಿರುದ್ಧ 18–16ರಲ್ಲಿ ಗೆದ್ದಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ತಂಡ ಲೂರ್ಡ್ಸ್‌ ಸೆಂಟ್ರಲ್ ಸ್ಕೂಲ್ ವಿರುದ್ಧ ಗೆದ್ದು ಪ್ರಶಸ್ತಿ ಗೆದ್ದಿತು. ಬಾಲಕಿಯರ ಫೈನಲ್‌ನಲ್ಲಿ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ಲೂರ್ಡ್ಸ್‌ ಸೆಂಟ್ರಲ್ ಸ್ಕೂಲ್ ವಿರುದ್ಧ ಜಯ ಸಾಧಿಸಿತು.

ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ (ನಿಂತವರು–ಎಡದಿಂದ): ವೈಷ್ಣವಿ ಹೆಗ್ಡೆ ಸ್ವಸ್ತಿ ಹೆಗ್ಡೆ ಪ್ರಾಪ್ತಿ ರೈ ಧನ್ವಿ ರಾವ್‌ ಕ್ಷಿತಿ ಶೆಟ್ಟಿ ಮೈಥಿಲಿ ನಾಯಕ್ ಮಣೇಲ್ (ಕುಳಿತವರು): ಸಾನ್ವಿ ಕೋಟ್ಯಾನ್‌ ಧನ್ವಿ ಶೆಟ್ಟಿ ಅನ್ವಿ ಪೂಜಾರಿ ನಿಯೋನ ಫೆರ್ನಾಂಡಿಸ್‌ ಸಿರಿಲ್ ಕೊಹೆಲ್ಲೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.