ಮುಂಬೈ (ಪಿಟಿಐ): ಫಿಡೆ ವಿಶ್ವಕಪ್ 2025 ಚೆಸ್ ಟೂರ್ನಿಯು ಗೋವಾದಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 27ರವರೆಗೆ ನಡೆಯಲಿದೆ. ಈ ಟೂರ್ನಿ ಮೂಲಕ 2026ರ ಕ್ಯಾಂಡಿಡೇಟ್ಸ್‌ಗೆ ಮೂವರು ಅರ್ಹತೆ ಪಡೆಯಲಿದ್ದಾರೆ.
ಒಟ್ಟು ₹ 17.5 ಕೋಟಿ ಬಹುಮಾನ ಮೊತ್ತ ಒಳಗೊಂಡಿರುವ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, ಆರ್.ಪ್ರಜ್ಞಾನಂದ, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್, ಫ್ಯಾಬಿಯಾನೊ ಕರುವಾನ ಸೇರಿದಂತೆ 206 ಆಟಗಾರರು ಕಣಕ್ಕೆ ಇಳಿಯಲಿದ್ದಾರೆ.
ಎಂಟು ಸುತ್ತುಗಳ ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಪ್ರತೀ ಪಂದ್ಯವು ಎರಡು ಕ್ಲಾಸಿಕಲ್ ಪಂದ್ಯ ಹಾಗೂ ಅಗತ್ಯಬಿದ್ದರೆ ರ‍್ಯಾಪಿಡ್ ಮತ್ತು ಬ್ರಿಟ್ಝ್ ಟೈಬ್ರೇಕರ್ ಒಳಗೊಂಡಿದೆ.
ಆತಿಥೇಯ ಭಾರತದಿಂದ 21 ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಜೂನ್ 2025ರ ಫಿಡೆ ರೇಟಿಂಗ್ ಪಟ್ಟಿಯ ಮೂಲಕ ಸ್ಥಾನ ಪಡೆದಿದ್ದಾರೆ. ಆದರೆ, ಅವರು ಕೆಲ ಸಮಯಗಳಿಂದ ಕ್ಲಾಸಿಕಲ್ ಚೆಸ್ ಆಡದಿರುವುದರಿಂದ ಅವರ ಸ್ಪರ್ಧೆ ಅನಿಶ್ಚಿತವಾಗಿದೆ.
23 ವರ್ಷಗಳ ನಂತರ ಭಾರತ ಈ ಟೂರ್ನಿಗೆ ಆತಿಥ್ಯ ನೀಡುತ್ತಿದೆ. 2002ರಲ್ಲಿ ಹೈದರಾಬಾದ್‌ನಲ್ಲಿ ಟೂರ್ನಿ ನಡೆದಿದ್ದು, ಆನಂದ್ ಚಾಂಪಿಯನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.