ADVERTISEMENT

ಹಾಕಿ: ಭಾರತ ಪುರುಷರ ತಂಡ ಚಾಂಪಿಯನ್‌

ಪಿಟಿಐ
Published 5 ಜೂನ್ 2022, 19:31 IST
Last Updated 5 ಜೂನ್ 2022, 19:31 IST

ಲಾಸನ್: ಮೊದಲ ಬಾರಿಗೆ ನಡೆದ ಎಫ್‌ಐಎಚ್‌ 5ಎ ಸೈಡ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮೂರು ಗೋಲುಗಳ ಹಿನ್ನಡೆಯಿಂದ ಚೇತರಿಸಿಕೊಂಡ ಗುರಿಂದರ್ ಸಿಂಗ್ ನಾಯಕತ್ವದ ಭಾರತ 6–4ರಿಂದ ಪೋಲೆಂಡ್ ತಂಡಕ್ಕೆ ಸೋಲುಣಿಸಿತು.

ಭಾರತ ಮಹಿಳಾ ತಂಡವು ಫೈನಲ್ ತಲುಪಲು ವಿಫಲವಾಯಿತು. ಗೆಲ್ಲಲೇಬೇಕಿದ್ದ ಕೊನೆಯ ಲೀಗ್ ಪಂದ್ಯದಲ್ಲಿ 4–4ರಿಂದ ದಕ್ಷಿಣ ಆಫ್ರಿಕಾ ಎದುರು ಡ್ರಾ ಸಾಧಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.