ಬರ್ಲಿನ್: ಭಾರತ ಮಹಿಳಾ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಶನಿವಾರ ಚೀನಾ ತಂಡಕ್ಕೆ 0–3 ಗೋಲುಗಳಿಂದ ಸೋತಿತು. ಇದು ಭಾರತ ತಂಡಕ್ಕೆ ಸತತ ಏಳನೇ ಸೋಲು ಆಗಿದೆ.
ಭಾರತ 15 ಪಂದ್ಯಗಳಿಂದ 10 ಸೋತಿದ್ದು ಒಟ್ಟು 10 ಪಾಯಿಂಟ್‌ಗಳೊಡನೆ ಲೀಗ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆ ಮೂಲಕ ಹಿಂಬಡ್ತಿ ಭೀತಿಯಲ್ಲಿದೆ. ಚೀನಾ (15 ಪಂದ್ಯಗಳಿಂದ 25 ಪಾಯಿಂಟ್ಸ್) ನಾಲ್ಕನೇ ಸ್ಥಾನದಲ್ಲಿದೆ.
ಕೊನೆಯ ಸ್ಥಾನ ಪಡೆಯುವ ತಂಡ, ಪ್ರೊ ಲೀಗ್‌ನಿಂದ ಹೊರಬಿದ್ದು, ಎಫ್‌ಐಎಚ್ ನೇಷನ್ಸ್ ಕಪ್‌ನಲ್ಲಿ ಆಡಬೇಕಾಗುತ್ತದೆ. ಇಂಗ್ಲೆಂಡ್ (14 ಪಂದ್ಯಗಳಿಂದ 11) ಸದ್ಯ ಎಂಟನೇ ಸ್ಥಾನದಲ್ಲಿದೆ.
ಚೆನ್ ಯಾಂಗ್ (21ನೇ ನಿಮಿಷ) ಮತ್ತು ಝಾಂಗ್ ಯಿಂಗ್ (26ನೇ ನಿಮಿಷ) ಅವರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರು. ಅನ್ಹುಲ್ ಯು (45ನೇ ನಿಮಿಷ) ಫೀಲ್ಡ್ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಭಾರತ ಭಾನುವಾರ ನಡೆಯುವ ರಿವರ್ಸ್ ಲೆಗ್‌ನಲ್ಲಿ ಚೀನಾ ವಿರುದ್ಧ ಮತ್ತೆ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.