ADVERTISEMENT

ಮೊದಲ ಅಖಿಲ ಭಾರತ ಅಂಚೆ ಪ್ಯಾರಾಗೇಮ್ಸ್‌: ಸಮರ್ಥ್‌ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:28 IST
Last Updated 2 ಮಾರ್ಚ್ 2026, 16:28 IST
ಸಮರ್ಥ ರಾವ್‌
ಸಮರ್ಥ ರಾವ್‌   

ಭಿಲಾಯಿ: ಕರ್ನಾಟಕದ ಸಮರ್ಥ್ ಜೆ.ರಾವ್ ಅವರು ಛತ್ತೀಸಗಢದ ಭಿಲಾಯಿಯಲ್ಲಿ ಶನಿವಾರ ಮುಕ್ತಾಯಗೊಂಡ ಮೊದಲ ಅಖಿಲ ಭಾರತ ಅಂಚೆ ಪ್ಯಾರಾಗೇಮ್ಸ್‌ನ ಪ್ಯಾರಾ ಚೆಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ವೃತ್ತದ ಕಾರವಾರ ವಿಭಾಗದ ಹೊನ್ನಾವರ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಟೂರ್ನಿ ಫೆಬ್ರುವರಿ 27 ಮತ್ತು 28ರಂದು ನಡೆಯಿತು.

ಚಿನ್ನದ ಪದಕ: ಸಮರ್ಥ್ ಅವರು ನವದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ನಾಗರಿಕ ಸೇವಾ ಚೆಸ್ ಪಂದ್ಯಾವಳಿಯಲ್ಲಿ ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಅವರು ವೈಯಕ್ತಿಕ ವಿಭಾಗದಲ್ಲಿ 9 ಸುತ್ತುಗಳಿಂದ 7 ಅಂಕಗಳನ್ನು ಗಳಿಸಿದರು.  ವಿಶೇಷ ಸಾಮರ್ಥ್ಯವುಳ್ಳ ಅತ್ಯುತ್ತಮ ಆಟಗಾರನಿಗೆ ನೀಡಲಾಗುವ ಚಿನ್ನದ ಪದಕವನ್ನು ಗೆದ್ದುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.