ನವದೆಹಲಿ: ನಿರೀಕ್ಷೆಯಂತೆ ಭಾರತ ಪುರುಷರ ತಂಡ 100–40 ಅಂತರದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ವಿಶ್ವ ಕಪ್ ಕೊಕ್ಕೊ ಟೂರ್ನಿಯ ಸೆಮಿಫೈನಲ್ ತಲುಪಿತು. ಮಹಿಳೆಯರ ತಂಡ ಶುಕ್ರವಾರ ಕ್ವಾರ್ಟರ್‌ಫೈನಲ್‌ನಲ್ಲಿ 109–16 ರಿಂದ ಬಾಂಗ್ಲಾದೇಶ ತಂಡವನ್ನು ಸದೆಬಡಿದು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು.
ಮಹಿಳಾ ತಂಡ ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ವನಿತೆಯರು ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 51–46 ರಿಂದ ಕೆನ್ಯಾ ತಂಡವನ್ನು ಸೋಲಿಸಿದರು.
ರಾಮಜಿ ಕಶ್ಯಪ್, ಪ್ರತೀಕ್ ವೈಕರ್ ಮತ್ತು ಆದಿತ್ಯ ಗಣಪುಲೆ ಅವರು ಮೊದಲ ‘ಟರ್ನ್’ನಲ್ಲೇ ಉತ್ತಮ ಪ್ರದರ್ಶನ ನೀಡಿ ಪುರುಷರ ತಂಡದ ಭರ್ಜರಿಗೆ ಗೆಲುವಿಗೆ ಬುನಾದಿ ಹಾಕಿಕೊಟ್ಟರು. ಮೊದಲ ಟರ್ನ್‌ನಲ್ಲೇ ಭಾರತ 58 ಪಾಯಿಂಟ್ಸ್ ಗಳಿಸಿತು. ಲಂಕಾ ತಂಡಕ್ಕೆ ಒಂದೂ ಪಾಯಿಂಟ್ ಗಳಿಸಲು ಬಿಡಲಿಲ್ಲ. ಎರಡು ಮತ್ತು ಮೂರನೇ ಸರದಿಯಲ್ಲೂ ಭಾರತ ತಂಡದ ಪ್ರಾಬಲ್ಯ ಮುಂದುವರಿಯಿತು.
ಪುರುಷರ ತಂಡವೂ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಲಿದೆ. ದಕ್ಷಿಣ ಆಫ್ರಿಕಾ ತಂಡ 58–38 ಪಾಯಿಂಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.