ರಾಯಿಟರ್ಸ್ ಚಿತ್ರ
ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಂದಿದ್ದ ಇರಾಕ್ ಪುರುಷರ ತಂಡದ ಜೂಡೊಪಟು ಅವರು ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಂದ ಪಡೆದ ಮಾದರಿಯಲ್ಲಿ ಎರಡು ಅನಬಾಲಿಕ್ ಸ್ಟಿರಾಯಿಡ್‌ಗಳ ಅಂಶ ಪತ್ತೆಯಾಗಿದೆ ಎಂದು ಅಂತರರಾಷ್ಟ್ರೀಯ ಟೆಸ್ಟಿಂಗ್ ಏಜನ್ಸಿ (ಐಟಿಐ) ಶುಕ್ರವಾರ ತಿಳಿಸಿದೆ.
28 ವರ್ಷ ವಯಸ್ಸಿನ ಸಜ್ಜದ್ ಸೆಹೆನ್ ಅವರಿಂದ ಮಂಗಳವಾರ ಪ್ಯಾರಿಸ್‌ನಲ್ಲಿ ಮದ್ದು ಸೇವನೆ ಪರೀಕ್ಷೆಯ ಸ್ಯಾಂಪಲ್ ಪಡೆಯಲಾಗಿತ್ತು. ಇದರಲ್ಲಿ ಮೆಟಾಂಡಿನೊನ್ ಮತ್ತು ಬೊಲ್ಡೆನೊನ್ ಅಂಶಗಳು ಕಂಡುಬಂದಿವೆ. ಅವರು ಮುಂದಿನ ಮಂಗಳವಾರ ಉಜ್ಬೇಕಿಸ್ತಾನ ಸ್ಪರ್ಧಿಯ ವಿರುದ್ಧ 81 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿಯಬೇಕಿತ್ತು.
ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇದರಿಂದ ‘ಅವರು ಸ್ಪರ್ಧೆ, ತರಬೇತಿ, ಕೋಚಿಂಗ್ ಅಥವಾ ಒಲಿಂಪಿಕ್ಸ್ ಕ್ರೀಡೆಗಳ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.