ADVERTISEMENT

ಭಾರತ ಹಾಕಿ ತಂಡದ ಮಾಜಿ ಕೋಚ್ ಮೈಕೆಲ್‌ ನಾಬ್ಸ್‌ ನಿಧನ

ಪಿಟಿಐ
Published 29 ಜನವರಿ 2026, 16:10 IST
Last Updated 29 ಜನವರಿ 2026, 16:10 IST
<div class="paragraphs"><p>ಮೈಕೆಲ್‌ ನಾಬ್ಸ್‌</p></div>

ಮೈಕೆಲ್‌ ನಾಬ್ಸ್‌

   

ಎಕ್ಸ್ ಚಿತ್ರ

ಮೆಲ್ಬರ್ನ್: ಲಂಡನ್ ಒಲಿಂಪಿಕ್ಸ್‌ (2012) ಸಂದರ್ಭದಲ್ಲಿ ಭಾರತ ಪುರುಷರ ಹಾಕಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್‌ ನಾಬ್ಸ್‌ (72) ಅವರು ದೀರ್ಘಕಾಲದ ಅನಾರೋಗ್ಯದ ಬಳಿ ಗುರುವಾರ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ADVERTISEMENT

ಅವರಿಗೆ ಪತ್ನಿ ಲೀ ಕೇಪ್ಸ್ ಮತ್ತು ಪುತ್ರಿ ಕೈಟ್ಲಿನ್ ಇದ್ದಾರೆ. ಲೀ ಕೇಪ್ಸ್‌ ಅವರೂ ಅಂತರರಾಷ್ಟ್ರೀಯ ಆಟಗಾರ್ತಿಯಾಗಿದ್ದರು. ಕೈಟ್ಲಿನ್ ಹಾಲಿ ಆಸ್ಟ್ರೇಲಿಯಾ ತಂಡದಲ್ಲಿ ಆಡುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿ 1979 ರಿಂದ 1985ರ ಅವಧಿಯಲ್ಲಿ ಡಿಫೆಂಡರ್ ಆಗಿದ್ದ ನಾಬ್ಸ್ 76 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಫಿಟ್ನೆಸ್‌, ವೃತ್ತಿಪರತೆಯಿಂದ ಖ್ಯಾತಿ ಪಡೆದಿದ್ದರು. 2008ರಲ್ಲಿ ಭಾರತ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫಲವಾದ ನಂತರ ನಾಬ್ಸ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು. ಅವರು ಜಪಾನ್ ತಂಡಕ್ಕೂ ಕೋಚ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.