ADVERTISEMENT

ಗಫ್‌ಗೆ ಸ್ವೆಟೆಕ್ ಸವಾಲು

ರಾಯಿಟರ್ಸ್
Published 3 ಜೂನ್ 2022, 19:24 IST
Last Updated 3 ಜೂನ್ 2022, 19:24 IST
ಕೊಕೊ ಗಫ್‌ – ಎಎಫ್‌ಪಿ ಚಿತ್ರಗಳು
ಕೊಕೊ ಗಫ್‌ – ಎಎಫ್‌ಪಿ ಚಿತ್ರಗಳು   

ಪ್ಯಾರಿಸ್‌: ಎರಡನೇ ಬಾರಿ ಫ್ರೆಂಚ್‌ ಓಪನ್ ಟೂರ್ನಿಯ ಕಿರೀಟ ಧರಿಸುವ ಹುಮ್ಮಸ್ಸಿನಲ್ಲಿರುವ ಇಗಾ ಸ್ವೆಟೆಕ್‌ ಶನಿವಾರ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅಮೆರಿಕದ ಕೊಕೊ ಗಫ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಪೋಲೆಂಡ್‌ನ ಇಗಾ ಸತತ 34 ಪಂದ್ಯಗಳಲ್ಲಿ ಜಯ ಸಾಧಿಸಿ ಮುನ್ನುಗ್ಗುತ್ತಿದ್ದು, ಗಫ್‌ ಸವಾಲು ಮೀರುವ ಉತ್ಸಾಹದಲ್ಲಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ 2020ರಲ್ಲಿ ಅವರಿಗೆ ಪ್ರಶಸ್ತಿ ಒಲಿದಿತ್ತು.

21 ವರ್ಷದ ಸ್ವೆಟೆಕ್‌, ಕೊನೆಯ ಬಾರಿ ಆಡಿದ ಎಂಟು ಫೈನಲ್ಸ್‌ಗಳಲ್ಲಿ ವಿಜಯದ ನಗೆ ಬೀರಿದ್ದಾರೆ. ಈ ಬಾರಿಯ ಫ್ರೆಂಚ್‌ ಓಪನ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ರಷ್ಯಾದ ದರಿಯಾ ಕಾಸ್ತಕಿನಾ ಅವರಿಗೆ ಸೋಲುಣಿಸಿ ಪ್ರಶಸ್ತಿ ಸುತ್ತು ತಲುಪಿದ್ದಾರೆ. 18 ವರ್ಷದ ಕೊಕೊ ಗಫ್ 2018ರಲ್ಲಿ ಇಲ್ಲಿ ಜೂನಿಯರ್ ವಿಭಾಗದ ಪ್ರಶಸ್ತಿ ಜಯಿಸಿದ್ದರು. ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಇದು ಅವರ ಮೊದಲ ಫೈನಲ್‌. ಟೂರ್ನಿಯ ಪ್ರಶಸ್ತಿ ಜಯಿಸಿ ಸ್ಮರಣೀಯವಾಗಿಸಿಕೊಳ್ಳುವ ಹಂಬಲದಲ್ಲಿ ಅವರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.