ADVERTISEMENT

ಸೆಬಾಸ್ಟಿಯನ್‌ ವೆಟಲ್‌ ದಾಖಲೆ

‘ಫಾರ್ಮುಲಾ ಒನ್‌’ ಚೈನೀಸ್ ಗ್ರಾಂಡ್‌ಪ್ರಿಕ್ಸ್

ಏಜೆನ್ಸೀಸ್
Published 12 ಏಪ್ರಿಲ್ 2019, 20:16 IST
Last Updated 12 ಏಪ್ರಿಲ್ 2019, 20:16 IST
ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟಲ್‌ ಅಭ್ಯಾಸಕ್ಕೆ ಬಂದ ಕ್ಷಣ –ರಾಯಿಟರ್ಸ್‌ ಚಿತ್ರ
ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟಲ್‌ ಅಭ್ಯಾಸಕ್ಕೆ ಬಂದ ಕ್ಷಣ –ರಾಯಿಟರ್ಸ್‌ ಚಿತ್ರ   

ಶಾಂಘೈ: ಫೆರಾರಿ ತಂಡದಸೆಬಾಸ್ಟಿಯನ್ ವೆಟಲ್ ‘ಫಾರ್ಮುಲಾ ಒನ್‌’ ಚೈನೀಸ್ ಗ್ರ್ಯಾನ್‌ಪ್ರೀ ರೇಸ್‌ನ ಅಭ್ಯಾಸ ಸ್ಪರ್ಧೆಯಲ್ಲಿ ವೇಗವಾಗಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದಾರೆ.

ಶುಕ್ರವಾರ ನಡೆದ ಫಾರ್ಮುಲಾ ಒನ್‌ನ 1000ನೇ ರೇಸ್‌ನಲ್ಲಿ ಅಭ್ಯಾಸ ದಲ್ಲಿ ಪಾಲ್ಗೊಂಡಿದ್ದ ವೆಟಲ್‌, ಒಂದು ನಿಮಿಷ, 33.911 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು.

ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್ ಅವರು ವೆಟಲ್‌ಗಿಂತ 0.207 ಸೆಕೆಂಡ್‌ ತಡವಾಗಿ ಗುರಿಮುಟ್ಟಿ ಎರಡನೇ ಸ್ಥಾನ ಪಡೆದರೆ, ಫೆರಾರಿಯ ಚಾರ್ಲ್ಸ್ ಲೆಕ್ಲೆರ್ಕ್‌ ಮೂರನೆ ಸ್ಥಾನ ಪಡೆದರು.

ADVERTISEMENT

ಹಿಂದಿನ ಫಾರ್ಮುಲಾ ಒನ್‌ ರೇಸ್‌ಗಳಲ್ಲಿ ನಿರಾಸೆ ಅನುಭವಿಸಿದ್ದ 31ರ ವಯೋಮಾನದ ವೆಟಲ್‌ ಅವರು ಇಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.