ADVERTISEMENT

ಚೆಸ್‌: ಪ್ರಗ್ನಾನಂದಗೆ ಎರಡನೇ ಜಯ

ಪಿಟಿಐ
Published 17 ಆಗಸ್ಟ್ 2022, 21:19 IST
Last Updated 17 ಆಗಸ್ಟ್ 2022, 21:19 IST
ಪ್ರಗ್ನಾನಂದ
ಪ್ರಗ್ನಾನಂದ   

ಮಿಯಾಮಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಗ್ನಾನಂದ ಅವರು ಇಲ್ಲಿ ನಡೆಯುತ್ತಿರುವ ಎಫ್‌ಟಿಎಕ್ಸ್ ಕ್ರಿಪ್ಟೊ ಕಪ್ ಚೆಸ್‌ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದ್ದಾರೆ.

ಬುಧವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಗ್ನಾನಂದ2.5-1.5ರಿಂದ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಅವರನ್ನು ಮಣಿಸಿದರು. ಗಿರಿ ಅವರಿಗೆ ಇದು ಸತತ ಎರಡನೇ ಸೋಲು.

ಎರಡು ಗೆಲುವಿನ ಬಳಿಕ ಪ್ರಗ್ನಾನಂದ ಅವರ ಬಳಿ ಸದ್ಯ ಆರು ಪಾಯಿಂಟ್‌ಗಳಿವೆ. ಮೂರನೇ ಸುತ್ತಿನಲ್ಲಿ ಅವರು ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.