ADVERTISEMENT

ಶೂಟಿಂಗ್‌ ಎಲ್ಲರ ಕೈಗೆಟಕುವಂತೆ ಮಾಡಬೇಕು: ನಾರಂಗ್‌

ಪಿಟಿಐ
Published 6 ಜುಲೈ 2019, 19:45 IST
Last Updated 6 ಜುಲೈ 2019, 19:45 IST
ಗಗನ್‌ ನಾರಂಗ್‌
ಗಗನ್‌ ನಾರಂಗ್‌   

ನವದೆಹಲಿ: ‘ಶೂಟಿಂಗ್‌ ಕ್ರೀಡೆಯು ಎಲ್ಲರ ಕೈಗೆಟಕುವಂತೆ ಮಾಡಬೇಕೆಂಬುದು ನನ್ನ ಬಯಕೆ. ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಭಾರತದ ಒಲಿಂಪಿಯನ್‌ ಶೂಟರ್‌ ಗಗನ್‌ ನಾರಂಗ್‌ ತಿಳಿಸಿದ್ದಾರೆ.

ನಾರಂಗ್‌ ಅವರು ಬೆಂಗಳೂರಿನಲ್ಲಿ ಗನ್‌ ಫಾರ್‌ ಗ್ಲೋರಿ ಶೂಟಿಂಗ್‌ ಅಕಾಡೆಮಿ ಸ್ಥಾಪಿಸಿದ್ದಾರೆ. ಗಗನ್‌ ನಾರಂಗ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಫೌಂಡೇಷನ್‌ ವತಿಯಿಂದ ದೇಶದಾದ್ಯಂತ ಪ್ರತಿಭಾನ್ವೇಷಣೆ ನಡೆಸಿ ಈ ಪೈಕಿ 30 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಿದ್ದಾರೆ.

‘ಕ್ರಿಕೆಟ್‌ ಮತ್ತು ಬ್ಯಾಡ್ಮಿಂಟನ್‌ ರೀತಿ ಶೂಟಿಂಗ್‌ ಕೂಡಾ ಎಲ್ಲರಿಗೂ ತಲುಪಬೇಕು. ಇದಕ್ಕಾಗಿ ಆಸಕ್ತರಿಗೆ ರಿಯಾಯಿತಿ ದರದಲ್ಲಿ ತರಬೇತಿ ನೀಡುವ ಆಲೋಚನೆ ಇದೆ’ ಎಂದಿದ್ದಾರೆ.

ADVERTISEMENT

‘ನಮ್ಮ ಕಾಲಕ್ಕೆ ಹೋಲಿಸಿದರೆ ಈಗ ಭಾರತದ ಶೂಟಿಂಗ್‌ನಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸರ್ಕಾರ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಕೈ ಜೋಡಿಸಿದರೆ ಅಭಿವೃದ್ಧಿಯು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.