ADVERTISEMENT

ವಿಶ್ವ ಟಿಟಿ ಚಾಂಪಿಯನ್‌ಷಿಪ್: ಪ್ರಿಕ್ವಾರ್ಟರ್‌ಫೈನಲ್‌ಗೆ ಯಶಸ್ವಿನಿ–ಚಿತಳೆ

ಪಿಟಿಐ
Published 19 ಮೇ 2025, 20:54 IST
Last Updated 19 ಮೇ 2025, 20:54 IST
<div class="paragraphs"><p>ಟೇಬಲ್ ಟೆನಿಸ್</p></div>

ಟೇಬಲ್ ಟೆನಿಸ್

   

(ಪಿಟಿಐ ಚಿತ್ರ)

ದೋಹಾ: ಭಾರತದ ಮಹಿಳಾ ಡಬಲ್ಸ್‌ ಜೋಡಿಯಾದ ಯಶಸ್ವಿನಿ ಘೋರ್ಪಡೆ ಮತ್ತು ದಿಯಾ ಚಿತಳೆ ಜೋಡಿ ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಿತು. ಆದರೆ 14ನೇ ಶ್ರೇಯಾಂಕದ ಸುತೀರ್ಥ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಜೋಡಿ ಎದುರಾಳಿಗಳಿಗೆ ಹೆಚ್ಚು ಪ್ರತಿರೋಧ ತೋರದೇ ನಿರ್ಗಮಿಸಿತು.

ADVERTISEMENT

ಕರ್ನಾಟಕದ ಯಶಸ್ವಿನಿ ಮತ್ತು ಮಹಾರಾಷ್ಟ್ರದ ದಿಯಾ ಅವರು 32ರ ಸುತ್ತಿನಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡು ಸಿಂಗಪುರದ ಜೆಂಗ್‌ ಜಿಯಾನ್ ಮತ್ತು ಸೆರ್‌ ಲಿನ್‌ ಕ್ವಿಯಾನ್ ಜೋಡಿಯನ್ನು 6–11, 11–6, 11–6, 11–9 ರಿಂದ ಸೋಲಿಸಿತು.

ಆದರೆ ಐಹಿಕಾ–ಸುತೀರ್ಥ ಜೋಡಿ ತಮಗಿಂತ ಕೆಳ ಕ್ರಮಾಂಕದ ಆ್ಯನೆಟ್‌ ಕಾಫ್‌ಮನ್‌– ಷಿಯೊನಾ ಶಾನ್‌ (ಜರ್ಮನಿ) ಜೋಡಿಗೆ ಕೇವಲ 23 ನಿಮಿಷಗಳಲ್ಲಿ ಶರಣಾಯಿತು. ಆ್ಯನೆಟ್‌– ಷಿಯೊನಾ 11–1, 13–11, 11–7 ರಿಂದ ಜಯಗಳಿಸಿತು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿತು. ಚಿತಳೆ–ಮಾನುಷ್‌ ಶಾ ಜೋಡಿ 0–3 ರಲ್ಲಿ (8–11, 9–11, 2–11) ಕೊರಿಯಾದ ಒಹ್ ಜುನ್ಸುಂಗ್‌– ಕಿಮ್‌ ನೆಯೊಂಗ್ ಎದುರು ಪರಾಭವ ಕಂಡಿತು.

ಮೂರು ಸೋಲುಗಳೊಡನೆ ಶಾ ಅವರಿಗೆ ಸೋಮವಾರ ನಿರಾಸೆಯ ದಿನವಾಗಿ ಪರಿಣಮಿಸಿತು. ಮಿಶ್ರ ಡಬಲ್ಸ್ ಸೋಲಿನ ನಂತರ ಅವರು ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ ಹೊರಬಿದ್ದರು. ಆರನೇ ಶ್ರೇಯಾಂಕದ ಫೆಲಿಕ್ಸ್ ಲೆಬ್ರುನ್ (ಫ್ರಾನ್ಸ್‌) ಅವರು 4–0 ಯಿಂದ (11–5, 11–6, 11–6, 11–9) ಶಾ ಅವರನ್ನು ಸುಲಭವಾಗಿ ಮಣಿಸಿದರು.

ಪುರುಷರ ಡಬಲ್ಸ್‌ನಲ್ಲೂ ಶಾ ಅವರಿಗೆ ಜಯ ಒಲಿಯಲಿಲ್ಲ. ಎಂಟನೇ ಶ್ರೇಯಾಂಕದ ಪಡೆದಿದ್ದ ಮಾನವ್ ಠಕ್ಕರ್‌–ಮಾನುಷ್‌ ಶಾ ಜೋಡಿ 5–11, 9–11, 11–8, 5–11 ರಲ್ಲಿ ಶ್ರೇಯಾಂಕರಹಿತ ಜರ್ಮನಿಯ ಬೆನೆಡಿಕ್ಟ್‌ ದೂಡ– ದಾಂಗ್‌ ಕ್ವಿಯು ಜೋಡಿಯೆದುರು ಸೋಲನ್ನು ಒಪ್ಪಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.