ಫ್ಲೂಮ್ಸ್‌ಬರ್ಗ್, ಸ್ವಿಟ್ಜರ್ಲೆಂಡ್: ಭಾರತದ ಗಾಲ್ಫ್ ಆಟಗಾರ್ತಿ ತ್ವೇಸಾ ಮಲಿಕ್ ಅವರು ಫ್ಲೂಮ್ಸ್‌ಬರ್ಗ್ ಮಹಿಳಾ ಓಪನ್ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಇಲ್ಲಿಯ ಗೇಮ್ಸ್ ವೆರ್ಡನ್‌ಬರ್ಗ್ ಗಾಲ್ಫ್ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನಲ್ಲಿ ಅವರು ಐದನೇ ಸ್ಥಾನ ಗಳಿಸಿದರು. ಲೇಡಿಸ್ ಯೂರೋಪಿಯನ್ ಟೂರ್‌ನ ಎಕ್ಸೆಸ್ ಸಿರೀಸ್‌ನ ಭಾಗವಾಗಿ ಈ ಟೂರ್ನಿ ನಡೆಯುತ್ತಿದೆ.
ಭಾರತದ ಇನ್ನೋರ್ವ ಆಟಗಾರ್ತಿ ದೀಕ್ಷಾ ದಾಗರ್ 28ನೇ ಸ್ಥಾನ ಗಳಿಸಿದರು.
ಮೊದಲ ಸ್ಥಾನವು ನಾರ್ವೆಯ ಗಾಲ್ಫರ್ ಸ್ಟಿನಾ ರೆಸೆನ್ ಪಾಲಾಯಿತು. ಸ್ಟೆಫಾನಿಯಾ ಅವಂಜೊ, ಎಮ್ಮಾ ಸ್ಪಿಟ್ಜ್ ಹಾಗೂ ಅನಾಯಿಲ್ ಕಾರ್ನೆಟ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿದರು.
ಜೆಕ್ ಮಹಿಳಾ ಗಾಲ್ಫ್ ಓಪನ್ ಟೂರ್ನಿಯಲ್ಲಿ ತ್ವೇಸಾ ಮೂರನೇ ಸ್ಥಾನ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.