ADVERTISEMENT

ಗಾಲ್ಫ್‌ ಆಟಗಾರ ಚೌರಾಸಿಯಾಗೆ ಕೋವಿಡ್‌

ಪಿಟಿಐ
Published 2 ಆಗಸ್ಟ್ 2020, 17:37 IST
Last Updated 2 ಆಗಸ್ಟ್ 2020, 17:37 IST
ಎಸ್‌ಎಸ್‌ಪಿ ಚೌರಾಸಿಯಾ
ಎಸ್‌ಎಸ್‌ಪಿ ಚೌರಾಸಿಯಾ   

ಕೋಲ್ಕತ್ತ: ಭಾರತದ‍ಪ್ರಮುಖ ಗಾಲ್ಫ್‌ ಆಟಗಾರ ಎಸ್‌ಎಸ್‌ಪಿ ಚೌರಾಸಿಯಾ ಅವರಿಗೆ ಕೋವಿಡ್‌–19 ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ. ಇದರಿಂದ ಯುರೋಪಿಯನ್‌ ಟೂರ್‌ನಲ್ಲಿ ಸ್ಪರ್ಧಿಸಬೇಕೆಂಬ ಅವರ ಕನಸು ಕಮರಿದೆ.

ಯುರೋಪಿಯನ್‌ ಟೂರ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಚೌರಾಸಿಯಾ, 2016 ಹಾಗೂ 2017ರಲ್ಲಿ ಇಂಡಿಯಾ ಓಪನ್‌ ಟೂರ್ನಿಗಳಲ್ಲಿ ಅಗ್ರಸ್ಥಾನ ಗಳಿಸಿದ್ದರು. ರಾಯಲ್‌ ಕಲ್ಕತ್ತ ಗಾಲ್ಫ್‌ ಅಂಗಣದಲ್ಲಿ ತರಬೇತಿಯನ್ನು ಆರಂಭಿಸಿದ್ದ ಅವರು ಈ ವಾರ ಇಂಗ್ಲೆಂಡ್‌ಗೆ ತೆರಳಬೇಕಿತ್ತು.

‘ಕೋವಿಡ್‌–19 ಸೋಂಕಿನ ಯಾವುದೇ ಲಕ್ಷಣಗಳು ನನ್ನಲ್ಲಿ ಇಲ್ಲ. ಪ್ರಯಾಣದ ಸಲುವಾಗಿ ಅಗತ್ಯವಾಗಿ ಕೋವಿಡ್‌ ತಪಾಸಣೆಗೆ ಒಳಗಾಗಬೇಕಿತ್ತು. ಅದರಂತೆ ಶುಕ್ರವಾರ ಪರೀಕ್ಷೆಗೆ ಒಳಪಟ್ಟಾಗ ಕೋವಿಡ್‌ ಇರುವುದು ದೃಢಪಟ್ಟಿದೆ' ಎಂದು 42 ವರ್ಷದ ಚೌರಾಸಿಯಾ ಹೇಳಿದ್ದಾರೆ.

ADVERTISEMENT

ಅವರ ಪತ್ನಿ ಸಿಮಂತಿನಿ ಅವರು ಮಂಗಳವಾರ ಕೋವಿಡ್‌ ತಪಾಸಣೆಗೆ ಒಳಗಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.