ADVERTISEMENT

ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಲೀಗ್‌: ಮುನ್ನಡೆಯಲ್ಲಿ ಪರ್ಹಾಮ್, ವೈಶಾಲಿ

ಪಿಟಿಐ
Published 7 ಸೆಪ್ಟೆಂಬರ್ 2025, 20:06 IST
Last Updated 7 ಸೆಪ್ಟೆಂಬರ್ 2025, 20:06 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಐಲ್‌ ಆಫ್‌ ಮ್ಯಾನ್‌: ಇರಾನ್‌ನ ಪರ್ಹಾಮ್‌ ಮಘಸೂಡ್ಲು ಅವರು ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಲೀಗ್‌ನ ಓಪನ್ ವಿಭಾಗದಲ್ಲಿ ಭಾನುವಾರ ನಾಲ್ಕನೇ ಸುತ್ತಿನ ಪಂದ್ಯಗಳ ನಂತರ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಭಾರತದ ಆರ್‌.ವೈಶಾಲಿ ಮತ್ತು ರಷ್ಯಾದ ಕ್ಯಾಥರಿನಾ ಲಾಗ್ನೊ ತಲಾ 3.5 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಮಘಸೂಡ್ಲು 3.5 ಅಂಕ ಹೊಂದಿದ್ದಾರೆ. ಭಾರತದ ಆರ್‌.ಪ್ರಜ್ಞಾನಂದ, ಅರ್ಜುನ್ ಇರಿಗೇಶಿ, ಡಿ.ಗುಕೇಶ್, ಅಮೆರಿಕದ ಅಭಿಮನ್ಯು ಮಿಶ್ರಾ, ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್, ಫ್ರಾನ್ಸ್‌ನ ಎಂ.ಮೌರಿಝಿ ಅವರು ತಲಾ ಮೂರು ಅಂಕ ಗಳಿಸಿದ್ದಾರೆ.

ಮೂರನೇ ಬೋರ್ಡ್‌ನಲ್ಲಿ ಗುಕೇಶ್ ಮತ್ತು ಅರ್ಜುನ್ ನಡುವಣ ಪಂದ್ಯ 46 ನಡೆಗಳಲ್ಲಿ ಡ್ರಾ ಆಯಿತು. ಪ್ರಜ್ಞಾನಂದ ಎರಡನೇ ಬೋರ್ಡ್‌ನಲ್ಲಿ 16 ವರ್ಷ ವಯಸ್ಸಿನ ಅಭಿಮನ್ಯು ಮಿಶ್ರಾ ಜೊತೆ ಡ್ರಾ ಮಾಡಿಕೊಂಡರು. ಮಹಿಳೆಯರ ವಿಭಾಗದ ಮೊದಲ ಬೋರ್ಡ್‌ನಲ್ಲಿ ವೈಶಾಲಿ ಅವರು ದಿನಾರಾ ವ್ಯಾಗ್ನರ್ ಜೊತೆ ಡ್ರಾ ಮಾಡಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.