ಮಯಾಮಿ: ಅಮೆರಿಕದ ಗ್ರೆಟ್ಚೆನ್ ವಾಲ್ಷ್ ಅವರು ಫ್ಲಾರಿಡಾದ ಅರ್ಲಾಂಡೊದಲ್ಲಿ ಶನಿವಾರ ನಡೆದ ಟಿರ್ ಪ್ರೊ ಸ್ವಿಮ್ ಸಿರೀಸ್ ಕೂಟದ ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯ ಹೀಟ್ಸ್‌ನಲ್ಲಿ 55.09 ಸೆ.ಗಳಲ್ಲಿ ಗುರಿಮುಟ್ಟಿ ವಿಶ್ವ ದಾಖಲೆ ಸ್ಥಾಪಿಸಿದರು.
ಈ ಹಿಂದಿನ ವಿಶ್ವ ದಾಖಲೆಯನ್ನು (55.18 ಸೆ.) ವಾಲ್ಷ್ ಕಳೆದ ವರ್ಷದ ಜೂನ್ 15ರಂದು ಇಂಡಿಯಾನಾ ಪೊಲೀಸ್‌ನಲ್ಲಿ ನಡೆದ ಅಮೆರಿಕದ ಒಲಿಂಪಿಕ್ಸ್ ಟ್ರಯಲ್ಸ್‌ನಲ್ಲಿ ಸ್ಥಾಪಿಸಿದರು. ಆದರೆ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ವದೇಶದ ಟೋರಿ ಹಸ್ಕೆ ಅವರಿಗಿಂತ ಹಿಂದೆಬಿದ್ದು ಬೆಳ್ಳಿ ಪದಕ ಗೆಲ್ಲಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.