
ವೇಟ್‌ಲಿಫ್ಟಿಂಗ್
ಪ್ರಾತಿನಿಧಿಕ ಚಿತ್ರ
ಮೋದಿನಗರ: ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ, ಕರ್ನಾಟಕದ ಗುರುರಾಜ ಪೂಜಾರಿ ಅವರು ರಾಷ್ಟ್ರೀಯ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 60 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದರು.
ಕುಂದಾಪುರದ ಗುರುರಾಜ ಪೂಜಾರಿ, ಈ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಗುರುವಾರ ಒಟ್ಟು 269 ಕೆ.ಜಿ. ತೂಕ ಎತ್ತಿ ಮೊದಲ ಸ್ಥಾನ ಪಡೆದರು. ಸ್ನಾಚ್‌ನಲ್ಲಿ 119 ಕೆ.ಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 150 ಕೆ.ಜಿ. ಎತ್ತಿದರು.
2018ರ ಕಾಮನ್ವೆಲ್ತ್ ಕ್ರೀಡೆಗಳ 56 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಪೂಜಾರಿ, 2022ರ ಆವೃತ್ತಿಯಲ್ಲಿ 61 ಕೆ.ಜಿ. ತೂಕ ಎತ್ತಿ ಕಂಚಿನ ಪದಕ ಗಳಿಸಿದ್ದರು.‘
ಮಣಿಪುರದ ರಿಶಿಕಾಂತ ಸಿಂಗ್ ಸ್ನಾಚ್‌ನಲ್ಲಿ 119 ಕೆ.ಜಿ. ಎತ್ತಿ ಹೋರಾಟ ನೀಡಿದರೂ, ಕ್ಲೀನ್ ಮತ್ತು ಜರ್ಕ್‌ನಲ್ಲಿ 147 ಕೆ.ಜಿ. ಎತ್ತಿ (ಒಟ್ಟು 266 ಕೆ.ಜಿ) ಎರಡನೇ ಸ್ಥಾನ ಪಡೆದರು. ಸರ್ವಿಸಸ್‌ನ ಎಸ್. ಗುರು ನಾಯ್ಡು (265 ಕೆ.ಜಿ) ಮೂರನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.