ADVERTISEMENT

ಬೀಲ್ ಚೆಸ್ ಉತ್ಸವಕ್ಕೆ ಹರಿಕೃಷ್ಣ

ಪಿಟಿಐ
Published 8 ಜುಲೈ 2020, 16:40 IST
Last Updated 8 ಜುಲೈ 2020, 16:40 IST
ಪೆಂಟಾಲ ಹರಿಕೃಷ್ಣ (ಬಲಬದಿ)
ಪೆಂಟಾಲ ಹರಿಕೃಷ್ಣ (ಬಲಬದಿ)   

ಚೆನ್ನೈ: ಭಾರತದ ಪಿ. ಹರಿಕೃಷ್ಣ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಇದೇ 18ರಿಂದ ನಡೆಯಲಿರುವ ಬೀಲ್ ಚೆಸ್ ಉತ್ಸವದಲ್ಲಿ ಸ್ಪರ್ಧಿಸಲಿದ್ದಾರೆ.

ಕೊರೊನೋತ್ತರ ಕಾಲದಲ್ಲಿ ನಡೆಯಲಿರುವ ಮೊದಲ ಅಂತರರಾಷ್ಟ್ರೀಯ ಚೆಸ್ ಉತ್ಸವ ಇದಾಗಲಿದೆ. ಹೋದ ನಾಲ್ಕು ತಿಂಗಳಿಂದ ವಿಶ್ವದಾದ್ಯಂತ ಟೂರ್ನಿಗಳು ಸ್ಥಗಿತವಾಗಿದ್ದವು.

ವಿಶ್ಚ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮೈಕೆಲ್ ಆ್ಯಡಮ್ಸ್ ಮತ್ತು ರಾಡೊಲ್ಸ್ ವೋಟ್ಸೆಜೆಕ್ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿರುವ ಹರಿಕೃಷ್ಣ ಅವರು ಕೂಡ ಆಹ್ವಾನ ಸ್ವೀಕರಿಸಿದ್ದಾರೆ. ಅವರು ಈ ಉತ್ಸವದ ಗ್ರ್ಯಾಂಡ್‌ಮಾಸ್ಟರ್ಸ್ ವಿಭಾಗದಲ್ಲಿ ಸ್ಪರ್ಧಿಸುವರು.

’ಆಹ್ವಾನ ಪಡೆದಿದ್ದು ಸಂತಸವಾಗಿದೆ. ಕಳೆದ ಕೆಲವು ದಿನಗಳಿಂದ ಬಹಳಷ್ಟು ಆನ್‌ಲೈನ್ ಟೂರ್ನಿಗಳನ್ನು ಆಡಿದ್ದೇನೆ. ಬಹಳ ಕಾಲದ ನಂತರ ಮತ್ತೆ ಬೋರ್ಡ್‌ ಗೇಮ್ ಆಡಲಿದ್ದೇನೆ‘ ಎಂದು ಹರಿಕೃಷ್ಣ ಹೇಳಿದ್ದಾರೆ.

2013ರಲ್ಲಿ ಬೀಲ್‌ ಉತ್ಸವದ ಮಾಸ್ಟರ್ ಓಪನ್‌ನಲ್ಲಿ ಹರಿಕೃಷ್ಣ ಅವರು ಜಯಿಸಿದ್ದರು. 2014 ಮತ್ತು 2017ರಲ್ಲಿ ಬೀಲ್ ಉತ್ಸವದಲ್ಲಿ ಹರಿಕೃಷ್ಣ ಅವರು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.