ADVERTISEMENT

ಹಾಕಿ ಇಂಡಿಯಾ ಮೇಲೆ ಪೂರ್ಣ ವಿಶ್ವಾಸ: ಎಫ್‌ಐಎಚ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 14:25 IST
Last Updated 7 ಜೂನ್ 2022, 14:25 IST
ಹಾಕಿ ಇಂಡಿಯಾ ತಂಡ
ಹಾಕಿ ಇಂಡಿಯಾ ತಂಡ   

ಲಾಸನ್: ‘ಹಾಕಿ ಇಂಡಿಯಾ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ’ ಎಂದಿರುವ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್‌), ‘ತನ್ನ ಎಲ್ಲ ಸದಸ್ಯ ಫೆಡರೇಷನ್‌ಗಳು ಆಯಾ ದೇಶದ ಕ್ರೀಡಾ ನೀತಿಗಳನ್ನು ಪಾಲಿಸಬೇಕೆಂಬುದನ್ನು ಬಯಸುತ್ತದೆ’ ಎಂದು ಹೇಳಿದೆ.

ರಾಷ್ಟ್ರೀಯ ಕ್ರೀಡಾ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂಬ ಕಾರಣ ನೀಡಿ ದೆಹಲಿ ಹೈಕೋರ್ಟ್, ಹಾಕಿ ಇಂಡಿಯಾ (ಎಚ್‌ಐ) ಆಡಳಿತವನ್ನು ನೋಡಿಕೊಳ್ಳಲು ಆಡಳಿತ ಮಂಡಳಿ (ಸಿಎಒ) ನೇಮಿಸಿತ್ತು. ಇದರ ಬೆನ್ನಲ್ಲೇ ಎಫ್‌ಐಎಚ್‌ ಹೇಳಿಕೆ ಹೊರಬಿದ್ದಿದೆ.

‘ಎಲ್ಲ ರಾಷ್ಟ್ರೀಯ ಫೆಡರೇಷನ್‌ಗಳೂ ಆ ದೇಶದ ಕ್ರೀಡಾ ನೀತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಹಾಕಿ ಇಂಡಿಯಾ ತನ್ನ ದೇಶದ ಕ್ರೀಡಾ ನೀತಿಗೆ ಬದ್ಧವಾಗಿಲ್ಲ ಎಂದಾದರೆ, ಅದು ಕೂಡಲೇ ನೀತಿಗಳನ್ನು ಪಾಲಿಸಬೇಕು’ ಎಂದು ಎಫ್‌ಐಎಚ್‌ ಮುಖ್ಯ ಕಾರ್ಯನಿರ್ವಾಹಕ ಥಿಯರಿ ವೀಲ್‌ ಹೇಳಿದ್ದಾರೆ.

ADVERTISEMENT

‘ಆದರೆ ಈಗ ನಡೆದಿರುವ ಬೆಳವಣಿಗೆಗಳು ಹಾಕಿ ಇಂಡಿಯಾ ಬಗ್ಗೆ ಎಫ್‌ಐಎಚ್‌ ಇಟ್ಟಿರುವ ನಂಬಿಕೆಯ ಮೇಲೆ ಯಾವುದೇ ಪರಿಣಾಮ ಬೀರದು’ ಎಂದೂ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.