ADVERTISEMENT

ಒಲಿಂಪಿಕ್‌ ಅರ್ಹತೆಗೆ ಭಾರತ ಯತ್ನ

ಭುವನೇಶ್ವರದಲ್ಲಿ ಇಂದಿನಿಂದ ಎಫ್‌ಐಎಚ್‌ ಸಿರೀಸ್‌ ಫೈನಲ್ಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:12 IST
Last Updated 5 ಜೂನ್ 2019, 19:12 IST
ಭಾರತ ಹಾಕಿ ತಂಡ (ಪಿಟಿಐ ಚಿತ್ರ)
ಭಾರತ ಹಾಕಿ ತಂಡ (ಪಿಟಿಐ ಚಿತ್ರ)   

ಭುವನೇಶ್ವರ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕ ಗೆದ್ದಿದ್ದ ಭಾರತ ಹಾಕಿ ತಂಡವು ಸದ್ಯ ಅರ್ಹತೆ ಪಡೆಯಲು ಹೆಣಗಾಡುತ್ತಿದೆ. ಗುರುವಾರ ಇಲ್ಲಿ ಆರಂಭವಾಗಲಿರುವ ಎಫ್ಐಎಚ್‌ ಸಿರೀಸ್‌ ಫೈನಲ್ಸ್‌ ಟೂರ್ನಿಯಲ್ಲಿ 2020ರ ಟೋಕಿಯೊ ಒಲಿಂಪಿಕ್‌ ಪ್ರವೇಶಕ್ಕಾಗಿ ಮನ್‌ಪ್ರೀತ್‌ ಸಿಂಗ್‌ ಪಡೆ ಪ್ರಯತ್ನಿಸಲಿದೆ. ನೂತನ ಕೋಚ್‌ ಗ್ರಹಾಂ ರೇಡ್‌ ನೇತೃತ್ವದಲ್ಲಿ ಪಳಗಿರುವ ತಂಡ, ಹೊಸ ಹುಮ್ಮಸಿನೊಂದಿಗೆ ಕಣಕ್ಕಿಳಿಯಲಿದೆ.

ಮೊದಲ ಪಂದ್ಯದಲ್ಲಿ ರಷ್ಯಾವನ್ನು ಎದುರುಸಲಿರುವ ಭಾರತ ತಂಡ, ಭಾರೀ ಅಂತರದ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ.

ಏಷ್ಯಾ, ಯುರೋಪ್‌, ಆಫ್ರಿಕಾ ಹಾಗೂ ಉತ್ತರ ಅಮೆರಿಕಾ ಖಂಡಗಳ ಎಂಟು ರಾಷ್ಟ್ರಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಎಫ್‌ಐಎಚ್‌ ಒಲಿಂಪಿಕ್‌ ಅರ್ಹತಾ ಟೂರ್ನಿ ಪ್ರವೇಶಕ್ಕೆ ಇರುವ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿವೆ.

ADVERTISEMENT

ಭಾರತ ತಂಡದ ಜೊತೆಗೆ ಪೋಲೆಂಡ್‌, ರಷ್ಯಾ ಹಾಗೂ ಉಜ್ಬೇಕಿಸ್ತಾನ ತಂಡಗಳು‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಜಪಾನ್‌, ಅಮೆರಿಕ ಹಾಗೂ ಮೆಕ್ಸಿಕೊ ತಂಡಗಳಿವೆ.

ಪಂದ್ಯ ಆರಂಭ: ಸಂಜೆ 7.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.