
ನವದೆಹಲಿ: ಪುರುಷರ ಹಾಕಿ ಇಂಡಿಯಾ ಲೀಗ್‌ನ ಎರಡನೇ ಆವೃತ್ತಿಯು ಜನವರಿ 3ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ತಮಿಳುನಾಡು ಡ್ರ್ಯಾಗನ್ಸ್ ಮತ್ತು ಹೈದರಾಬಾದ್ ತೂಫಾನ್ಸ್ ಮುಖಾಮುಖಿಯಾಗಲಿವೆ ಎಂದು ಹಾಕಿ ಇಂಡಿಯಾ ಶನಿವಾರ ತಿಳಿಸಿದೆ.
ಮೂರು ನಗರಗಳಲ್ಲಿ ನಡೆಯಲಿರುವ ಈ ಟೂರ್ನಿಯ ಫೈನಲ್ ಹಣಾಹಣಿ ಜ.26ರಂದು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಂಟು ತಂಡಗಳನ್ನು ಒಳಗೊಂಡ ಟೂರ್ನಿಯ ಮೊದಲ ಲೆಗ್ ಜ.3ರಿಂದ 9ರವರೆಗೆ ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಜ.11ರಿಂದ 16ರವರೆಗೆ ರಾಂಚಿಯಲ್ಲಿ ಎರಡನೇ ಲೆಗ್ ನಡೆಯಲಿದೆ. ಭುವನೇಶ್ವರದಲ್ಲಿ ಜ.17ರಿಂದ 26ರವರೆಗೆ ಮೂರನೇ ಲೆಗ್ ಆಯೋಜಿಸಲಾಗಿದೆ. ಪ್ರತಿ ತಂಡವು ರೌಂಡ್ ರಾಬಿನ್ ಸ್ವರೂಪದಲ್ಲಿ ಇತರ ಏಳು ತಂಡಗಳನ್ನು ಒಮ್ಮೆ ಎದುರಿಸಲಿದ್ದು, ಅಗ್ರ ನಾಲ್ಕು ತಂಡಗಳು ಪ್ಲೇ ಆಫ್‌ಗೆ ಮುನ್ನಡೆಯುತ್ತವೆ. ಪ್ಲೇಆಫ್ ಹಂತದ ಪಂದ್ಯಗಳೂ ಭುವನೇಶ್ವರದಲ್ಲಿ ನಡೆಯಲಿವೆ.
ಮಹಿಳಾ ಹಾಕಿ ಇಂಡಿಯಾ ಲೀಗ್ ಡಿಸೆಂಬರ್ 28ರಂದು ರಾಂಚಿಯಲ್ಲಿ ಪ್ರಾರಂಭವಾಗಲಿದ್ದು, ಜನವರಿ 10ರಂದು ಫೈನಲ್ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.