ADVERTISEMENT

ಹಾಕಿ ಕರ್ನಾಟಕದ ಆಯ್ಕೆ ಟ್ರಯಲ್ಸ್‌ಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 18:28 IST
Last Updated 27 ಜನವರಿ 2021, 18:28 IST

ಬೆಂಗಳೂರು: ಮಾರ್ಚ್‌ನಲ್ಲಿ ಹಾಕಿ ಇಂಡಿಯಾ ಆಯೋಜಿಸಲಿರುವ ಸಬ್‌ ಜೂನಿಯರ್ ಬಾಲಕ ಮತ್ತು ಬಾಲಕಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡಗಳ ಆಯ್ಕೆಗಾಗಿ ಹಾಕಿ ಕರ್ನಾಟಕಫೆಬ್ರುವರಿಯಲ್ಲಿ ಟ್ರಯಲ್ಸ್‌ ಆಯೋಜಿಸಲಿದೆ.

2005ರ ಜನವರಿ ಒಂದರಂದು ಅಥವಾ ನಂತರ ಜನಿಸಿದವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ಹರಿಯಾಣದ ನರ್ವಾನಾ ಜಿಂದ್‌ನಲ್ಲಿರುವ ನವದೀಪ್ ಕ್ರೀಡಾಂಗಣದಲ್ಲಿ ಮಾರ್ಚ್ 17ರಿಂದ 28ರ ವರೆಗೆ ಬಾಲಕರ ಚಾಂಪಿಯನ್‌ಷಿಪ್‌, ಜಾರ್ಖಂಡ್‌ನ ಸಿಮ್ದೇಗಾದಲ್ಲಿ ಮಾರ್ಚ್ 10ರಿಂದ 21ರ ವರೆಗೆ ಬಾಲಕರ ಚಾಂಪಿಯನ್‌ಷಿಪ್ ನಡೆಯಲಿದೆ.

ಕೊಡಗಿನ ಪೊನ್ನಂಪೇಟೆಯ ಮಿನಿ ಕ್ರೀಡಾಂಗಣದಲ್ಲಿ ಫೆಬ್ರುವರಿ ಆರರಂದು ಬಾಲಕಿಯರ ವಿಭಾಗದ ಮತ್ತು ಏಳರಂದು ಬಾಲಕರ ವಿಭಾಗದ ಆಯ್ಕೆ ನಡೆಯಲಿದೆ. ಕ್ರೀಡಾಪಟುಗಳು ಪಾಸ್‌ಪೋರ್ಟ್ ಅಳತೆಯ ಮೂರು ಫೋಟೊಗಳು, ಆಧಾರ್ ಕಾರ್ಡ್‌ ಮತ್ತು ಜನನ ಪ್ರಮಾಣಪತ್ರದ ಮೂಲ ದಾಖಲೆಯನ್ನು ತೆಗೆದುಕೊಂಡು ಬರಬೇಕು ಎಂದು ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.